ಕುಂಬಳೆ: ಮಳೆಗಾಲದ ಆರಂಭದಲ್ಲೇ ಕುಂಬಳೆ ಬಸ್ ನಿಲ್ದಾಣ ನೀರಿನಿಂದ ಮುಳುಗಿದೆ. ಮಳೆ ಸುರಿಯುವಾಗ ಪ್ರಯಾಣಿಕರು ಒದ್ದೆಯಾಗದಿರಲು ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ವಿವಾದಿತ ಬಸ್ ವೈಟಿಂಗ್ ಶೆಡ್ ಇದ್ದು ಅದರ ಮುಂಭಾಗದಲ್ಲಿ ನೀರು ತುಂಬಿ ಕೊಂಡಿದೆ. ಇದರಿಂದ ಅದರ ಆಚೆ ಭಾಗದಲ್ಲಿ ಬಸ್ಗಳನ್ನು ನಿಲ್ಲಿಸಲಾಗು ತ್ತಿದೆ. ಅಲ್ಲಿಗೆ ತಲುಪಬೇಕಾದರೆ ತುಂಬಿಕೊಂಡಿರುವ ನೀರಿನಲ್ಲೇ ನಡೆದು ಹೋಗಬೇಕಾಗಿದೆ. ಭಾರೀ ಮೊತ್ತ ವ್ಯಯಿಸಿ ನಿರ್ಮಿಸಿದ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಚರಂಡಿಗಿಂತ ತಗ್ಗು ಪ್ರದೇಶದಲ್ಲಿದ್ದ ರಸ್ತೆಯಲ್ಲಿ ನವೀಕರಣ ವೇಳೆ ಚರಂಡಿಯ ಭಾಗದಿಂದ ಮಣ್ಣು ತೆಗೆದು ರಸ್ತೆಗೆ ತುಂಬಿಸಿದ್ದು ಇದು ಸಮಸ್ಯೆಗೆ ಕಾರಣವಾಗಿದೆ.
ಮಳೆ ನೀರು ಚರಂಡಿಗೆ ತಲುಪುವ ರೀತಿಯಲ್ಲಿ ವ್ಯವಸ್ಥೆಗೊಳಿಸಿದ್ದರೆ ಇಲ್ಲಿ ನೀರು ತುಂಬಿಕೊಳ್ಳುವ ಸಮಸ್ಯೆಯನ್ನು ತಪ್ಪಿಸಬಹುದಾಗಿತ್ತೆಂದು ಹೇಳಲಾ ಗುತ್ತಿದೆ. ಆದರೆ ಕಾಮಗಾರಿಯಲ್ಲಿ ನಡೆದ ಲೋಪದಿಂದ ಪ್ರಯಾಣಿಕರಿಗೆ, ಬಸ್ ಸಿಬ್ಬಂದಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬಸ್ ನಿಲ್ದಾಣವನ್ನು ಕೆಲವರ ಸೌಕರ್ಯಕ್ಕಾಗಿ ಬದಲಾಯಿಸುವ ಪಂಚಾಯತ್ ಅಧಿಕಾರಿಗಳಿಗೆ ಜನರ ಸಮಸ್ಯೆ ಲೆಕ್ಕಕ್ಕಿಲ್ಲದಂತಾಗಿದೆ. ರಾಜಕೀಯ ಪಕ್ಷಗಳು, ವ್ಯಾಪಾರಿ ಸಂಘಟನೆಗಳು ಈ ವಿಷಯದಲ್ಲಿ ಮೌನ ವಹಿಸುತ್ತಿವೆ. ರಸ್ತೆಯಲ್ಲಿ ತುಂಬಿಕೊಂಡಿರುವ ನೀರಿನಿಂದ ಸೃಷ್ಟಿಯಾಗುವ ಸಮಸ್ಯೆಗೆ ಇನ್ನಾದರೂ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ ಅದಕ್ಕೆ ಪಂಚಾಯತ್ನಲ್ಲಿ ಆಡಳಿತ ನಡೆಸುವವರಿಗೆ ಆಸಕ್ತಿ ಬೇಡವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.






