ಪೆಟ್ರೋಲ್ ಬಂಕ್‌ನಲ್ಲಿ ಇಬ್ಬರ ಮೇಲೆ ಹಲ್ಲೆ: ಗ್ಲಾಸ್‌ಗೆ ಹಾನಿ

ಕುಂಬಳೆ: ಪೆಟ್ರೋಲ್ ಬಂಕ್‌ನಲ್ಲಿ ಬೈಕ್ ರೈಸ್ ಮಾಡಿದನ್ನು ಪ್ರಶ್ನಿಸಿದ ಇಬ್ಬರ ವಿರುದ್ಧ ಹಲ್ಲೆ ನಡೆಸಿ, ಹೆಲ್ಮೆಟ್ ನಿಂದ ಬಂಕ್‌ನ ಕಚೇರಿಯ ಗಾಜು ಒಡೆದು 5000 ರೂ. ನಷ್ಟ ಉಂಟುಮಾ ಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅದಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಪಾಡಿ ಕಡಪ್ಪುರ ನಿವಾಸಿ ಹಾಗೂ ಪ್ರಸ್ತುತ ಪೆಟ್ರೋಲ್ ಬಂಕ್‌ನ ಕಾರ್ಮಿಕರೂ ಆಗಿರುವ ಅನೂಪ್ (22) ಮತ್ತು ಕೊಪಾಡಿಯ ಕಿಶೋರ್ (20) ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು, ಇದರಂತೆ ಅನೂಪ್ ನೀಡಿದ ದೂರಿನಂತೆ ಕೊಪಾಡಿಯ ಝುಲ್ಫಿಕರ್ ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿನ್ನೆ ಈ ಘಟನೆ ನಡೆದಿದೆ. ಆರೋಪಿ ಅನೂಪ್‌ನ ಮೇಲೆ ಹಲ್ಲೆ ನಡೆಸಿದಾಗ ಅದನ್ನು ತಡೆಯಲೆತ್ನಿಸಿದಾಗ ಕಿಶೋರ್‌ನ ಮೇಲೂ ಆತ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

RELATED NEWS

You cannot copy contents of this page