ಧರ್ಮತ್ತಡ್ಕದ ಜೋನ್ ಡಿ’ಸೋಜಾರಿಗಾಗಿ ಮುಂದುವರಿದ ಶೋಧ

ಉಪ್ಪಳ: ಸ್ನೇಹಿತನನ್ನು ಭೇಟಿಯಾಗಲೆಂದು ತಿಳಿಸಿ ಹೋದ ಬಳಿಕ ನಿಗೂಢವಾಗಿ ನಾಪತ್ತೆಯಾದ ಧರ್ಮತ್ತಡ್ಕ ನಿವಾಸಿ ಜೋನ್ ಡಿ’ಸೋಜಾ (೬೦)ರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿ ಯುತ್ತಿದೆಯೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.

ಜೋನ್ ಡಿ’ಸೋಜಾ ಈ ತಿಂಗಳ ೨ರಂದು ಬೆಳಿಗ್ಗೆ ೬ ಗಂಟೆಗೆ ಪೆರ್ಮುದೆಯಲ್ಲಿರುವ ಸ್ನೇಹಿತ ಜೋಸೆಫ್ ಎಂಬವರನ್ನು ಭೇಟಿಯಾಗಲೆಂದು ತಿಳಿಸಿ ಸ್ಕೂಟರ್‌ನಲ್ಲಿ ತೆರಳಿದ್ದರು. ಆದರೆ ಅನಂತರ ಮನೆಗೆ ಮರಳಿ ಬಂದಿಲ್ಲ. ಈ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಎಸ್‌ಐ ರುಮೇಶ್ ನೇತೃತ್ವದ  ಪೊಲೀಸರು ಹುಡುಕಾಟ ನಡೆಸಿದಾಗ ಅವರ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಅಂಬಾರು ಎಂಬಲ್ಲಿನ ರಸ್ತೆ ಬದಿ ಪತ್ತೆಯಾಗಿದೆ. ಆ ಮೊಬೈಲ್ ಪರಿಶೀಲಿಸಿದ್ದು, ಆದರೆ ಅದರಿಂದ ಯಾವುದೇ ಮಾಹಿತಿ ಲಭಿಸಿಲ್ಲವೆನ್ನ ಲಾಗಿದೆ. ಧರ್ಮತ್ತಡ್ಕ ಸಹಿತ ವಿವಿಧೆ ಡೆಗಳಲ್ಲಿ  ಸಿಸಿ ಕ್ಯಾಮರಾ ಪರಿಶೀಲಿಸಿ ದಾಗ ಅದರಲ್ಲಿ ಯಾವುದೇ ದೃಶ್ಯ ಕಂಡುಬಂದಿಲ್ಲ. ಜೋನ್ ಡಿಸೋಜಾರ ನಾಪತ್ತೆಯಿಂದ  ಕುಟುಂಬ, ಸಂಬಂಧಿಕರಲ್ಲಿ ಆತಂಕ ಸೃಷ್ಟಿಸಿದೆ.

You cannot copy contents of this page