62 ವರ್ಷ ಹಳೆಯದಾದ ಭಜನಾ ಮಂದಿರ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ: ಬಿಜೆಪಿ ಖಂಡನೆ

ಮಂಗಲ್ಪಾಡಿ: ಪಂಚಾಯತ್ ವ್ಯಾಪ್ತಿಯ ಸುಭಾಶ್ ನಗರದಲ್ಲಿ ಕಳೆದ 62 ವರ್ಷಗಳಿಂದ ಕಾರ್ಯಾಚರಿಸುವ ಭಜನಾ ಮಂದಿರದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆವೊಡ್ಡುತ್ತಿರುವುದು ಸರಿಯಲ್ಲವೆಂದು ಬಿಜೆಪಿ ತಿಳಿಸಿದ್ದು, ಸ್ಥಳಕ್ಕೆ ಮುಖಂಡರು ಭೇಟಿ ನೀಡಿ ಪದಾಧಿಕಾರಿಗಳಿಗೆ ಬೆಂಬಲ ಘೋಷಿಸಿದ್ದಾರೆ. ಮುಸ್ಲಿಂಲೀಗ್ ಆಡಳಿತದ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಲೋಕೋಪಯೋಗಿ ಅಸಿಸ್ಟೆಂಟ್ ಇಂಜಿನಿಯರ್ ಶೋಭ ಅವರ ಸೂಚನೆ ಮೇರೆಗೆ ಬಿಜೆಪಿ ಪಂಚಾಯತ್‌ಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿದೆ. ಅಲ್ಲದೆ ಮಂದಿರ ಪದಾಧಿಕಾರಿಗಳು, ಸ್ಥಳೀಯರು ಸ್ಥಳದಲ್ಲಿ ನಡೆಸುತ್ತಿದ್ದ ಶ್ರಮದಾನದಲ್ಲಿಯೂ ಬಿಜೆಪಿ ಮುಖಂಡರು ಭಾಗವಹಿಸಿದ್ದಾರೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ. ರಮೇಶ್, ಕುಂಬಳೆ ಮಂಡಲ ಬಿಜೆಪಿ ಅಧ್ಯಕ್ಷ ಬಿ. ವಿಕ್ರಂಪೈ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

You cannot copy contents of this page