ನಗರದ ರಸ್ತೆಗಳ ಶೋಚನೀಯಾವಸ್ಥೆ: ಬಿಜೆಪಿಯಿಂದ ಇಂದು ದೊಂದಿ ಮೆರವಣಿಗೆ

ಕಾಸರಗೋಡು: ನಗರದ ರಸ್ತೆಗಳ ಶೋಚನೀಯಾವಸ್ಥೆ ಪರಿಹಾರಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಬಿಜೆಪಿ ನಗರಸಭಾ ಸಮಿತಿ ನೇತೃತ್ವದಲ್ಲಿ ಇಂದು ಸಂಜೆ ನಗರದಲ್ಲಿ ದೊಂದಿ ಮೆರವಣಿಗೆ ನಡೆಯಲಿದೆ. ಮಳೆ ಸುರಿಯುವ ವೇಳೆ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೂ ಅಡಚಣೆ ಎದುರಾಗುತ್ತಿದ್ದು, ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಪೈಪ್ ಲೈನ್ ಅಳವಡಿಸಿದ ಬ ಳಿಕ ಹೊಂಡ ಮುಚ್ಚುವಲ್ಲಿ ಭಾರೀ ಲೋಪವುಂಟುಮಾಡಲಾಗುತ್ತಿದೆ. ರಸ್ತೆಯ ಹೊಂಡ ಮುಚ್ಚುವಲ್ಲಿ ಅಧಿಕಾರಿಗಳು ತೋರಿಸುವ ನಿರ್ಲಕ್ಷ್ಯ ನೀತಿ ಕೊನೆಗೊಳಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಇಂದು ದೊಂದಿ ಮೆರವಣಿಗೆ ನಡೆಯಲಿದ್ದು  ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಬಿಜೆಪಿ ನಗರಸಭಾ ಸಮಿತಿ ತಿಳಿಸಿದೆ.

You cannot copy contents of this page