ಕಾರಿನಲ್ಲಿ ಸಾಗಿಸುತ್ತಿದ್ದ 30 ಕಿಲೋ ಗಾಂಜಾ ಸಹಿತ ಅಂತಾರಾಜ್ಯ ಆರೋಪಿ ಲಾಲಾಕಬೀರ್, ಸಹಚರನ ಬಂಧನ

ಕುಂಬಳೆ: ಆಪರೇಶನ್ ತೂಫಾನ್ ಯೋಜನೆಯಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದಲ್ಲಿರುವ ಡಾನ್ಸಾಫ್ ಟೀಂ ಹಾಗೂ  ಕುಂಬಳೆ  ಪೊಲೀಸರು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ  ಅಂತಾರಾಜ್ಯ ಆರೋಪಿ ಲಾಲಾ ಕಬೀರ್ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ. ಇವರು ಸಂಚರಿಸುತ್ತಿದ್ದ ಹೋಂಡಾ ಸಿಟಿ ಕಾರಿನಿಂದ ೩೧ ಕಿಲೋ ಗಾಂಜಾ ವಶಪಡಿಸಲಾಗಿದೆ. ಕಾಞಂಗಾಡ್ ನಿವಾಸಿಯಾದ ಲಾಲಾ ಕಬೀರ್‌ನೊಂದಿಗೆ ಸಹಚರನಾದ ಮುಹಮ್ಮದ್ ನಿಹಾಲ್ ಎಂಬಾತನೂ ಸೆರೆಗೀಡಾಗಿದ್ದಾನೆ.

ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಿಕ್ಕಾಡಿ ಟೋಲ್ ಪ್ಲಾಸಾ ಸಮೀಪದಿಂದ ಈ ಇಬ್ಬರನ್ನು ಸೆರೆಹಿಡಿಯಲಾಗಿದೆ. ಈ ಗಾಂಜಾವನ್ನು ಓಡಿಸ್ಸಾದಿಂದ ತಂದಿರುವುದಾಗಿ ಬಂಧಿತರು ತಿಳಿಸಿದ್ದಾರೆ. ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್, ಎಸ್‌ಐ ಕೆ.ಪಿ. ಗಣೇಶನ್ ಎಂಬಿವರ ನೇತೃತ್ವದಲ್ಲಿ ತಪಾಸಣೆ ಮುಂದುವರಿಯುತ್ತಿದೆ. ಕಳವು, ಅಪಹರಣ,ಕೊಟೇಶನ್ ಸಹಿತ ಹಲವು ಪ್ರಕರಣಗಳಲ್ಲಿ ಲಾಲಾ ಕಬೀರ್ ಆರೋಪಿಯಾಗಿದ್ದಾನೆ. ಕೇರಳ, ಕರ್ನಾಟಕ ರಾಜ್ಯಗಳಲ್ಲಾಗಿ ಈತನ ವಿರುದ್ಧ ಹಲವು ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.  ಮೈಸೂರಿನ ಜೈಲಿನಲ್ಲಿದ್ದ ಲಾಲಾ ಕಬೀರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದನು

You cannot copy contents of this page