ಉಪ್ಪಳ: ಹೆದ್ದಾರಿ ಅಭಿವೃದ್ದಿ ಗೊಂಡು ಸರ್ವೀಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಿದರೂ ಅಲ್ಲಿ ಬಸ್ಗಳನ್ನು ನಿಲ್ಲಿಸದೆ ಅಲ್ಪ ಮುಂದೆ ನಿಲ್ಲಿಸುವುದು ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿರುವು ದಾಗಿ ದೂರಲಾಗಿದೆ. ಬಂದ್ಯೋಡು, ನಯಬಜಾರ್, ಕೈಕಂಬ, ಹೊಸಂಗಡಿ ಸಹಿತ ಹಲವು ಕಡೆಗಳಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಆದರೆ ಖಾಸಗಿ ಸಹಿತ ಸರಕಾರಿ ಬಸ್ಗಳನ್ನು ತಂಗು ದಾಣದಲ್ಲಿ ನಿಲ್ಲಿಸದೆ ಅಲ್ಪ ದೂರ ನಿಲ್ಲಿಸುತ್ತಿರುವುದ ರಿಂದಾಗಿ ಪ್ರಯಾಣಿ ಕರು ಅಲ್ಲಿ ತನಕ ಓಡಿ ಹೋಗುವ ಅವಸ್ಥೆ ಉಂಟಾಗಿರುವುದಾಗಿ ದೂರಲಾಗಿದೆ. ಪ್ರಯಾಣಿಕರು ತಂಗುದಾಣದಲ್ಲಿ ನಿಂತರೂ ಬಸ್ಗಳನ್ನು ಚಾಲಕರಿಗೆ ಬೇಕಾದಲ್ಲಿ ನಿಲ್ಲಿಸಲಾಗುತ್ತಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ. ಇದರಿಂದ ಬಸ್ ತಂಗುದಾಣ ಉಪಯೋಗ ಶೂನ್ಯವಾಗುತ್ತಿದೆ. ಅಲ್ಲದೆ ಬಸ್ಗಳನ್ನು ತಂಗುದಾಣದ ಅಲ್ಪ ಮುಂದಕ್ಕೆ ಇರುವ ಜಂಕ್ಷನ್ ಹಾಗೂ ಅಂಡರ್ ಪಾಸ್ ಹೊಂದಿರುವ ರಸ್ತೆಯಲ್ಲಿ ನಿಲ್ಲಿಸುತ್ತಿರುವುದು ಇತರ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಬಸ್ಗಳನ್ನು ತಂಗುದಾಣದಲ್ಲೇ ನಿಲ್ಲಿಸಲು ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







