ಅಡೂರು ಸೇವಾ ಸಹಕಾರಿ ಬ್ಯಾಂಕ್‌ನ ಕಾನ್ಫರೆನ್ಸ್ ಹಾಲ್ ಉದ್ಘಾಟನೆ

ಅಡೂರು: ಅಡೂರು ಸೇವಾ ಸಹಕಾರಿ ಬ್ಯಾಂಕ್‌ನ ಪ್ರಿಯದರ್ಶಿನಿ ಕಾನ್ಫರೆನ್ಸ್ ಹಾಲ್, ಗೊಬ್ಬರ ಡಿಪ್ಪೋದ ಉದ್ಘಾಟನೆಯನ್ನು ಉದುಮ ಶಾಸಕ ಕೆ. ನೀಲಕಂಠನ್ ನಿರ್ವಹಿಸಿದರು. ಇದೇ ವೇಳೆ ವಿವಿಧ ಪರೀಕ್ಷೆಗಳಲ್ಲಿ ಉನ್ನತ ಜಯ ಗಳಿಸಿದವರನ್ನು ಅಭಿನಂದಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಎ. ಗೋಪಾಲ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ, ಉಪಾಧ್ಯಕ್ಷೆ ಶಾರದಾ ಏವಂದೂರು, ಬ್ಲೋಕ್ ಪಂ. ಸದಸ್ಯ ಜಿ. ಗೋಪಾಲನ್, ಪಂಚಾಯತ್ ಸದಸ್ಯರಾದ ಗಂಗಾಧರ ಕಾಂತಡ್ಕ, ಸೈರ ಎ.ಬಿ, ಬಿಂದು ಕೆ.ವಿ, ರತನ್ ಕುಮಾರ್ ನಾಯ್ಕ್, ಅಬ್ದುಲ್ಲ, ಪ್ರಮೀಳಾ ಸಿ. ನಾಕ್, ಶ್ಯಾಮಲಾ ಕೆ., ದಾಮೋದರನ್ ಟಿ.ಕೆ, ಸಿ.ಎಚ್. ಅಶ್ರಫ್ ಹಾಜಿ, ಎ. ಚಂದ್ರಶೇಖರ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಘಟಕ ಅಧ್ಯಕ್ಷ ಕೆ. ಮೊಯ್ದೀನ್ ಕುಂಞಿ ಮಾತನಾಡಿದರು. ಅಬ್ದುಲ್ ಬಶೀರ್ ಸ್ವಾಗತಿಸಿ, ಸುಹರಾ ವಂದಿಸಿದರು.

You cannot copy contents of this page