ರಸ್ತೆಗೆ ಬಾಗಿಕೊಂಡಿರುವ ಮರಗಳು ಮಂಜೇಶ್ವರ ಒಳರಸ್ತೆಯಲ್ಲಿ ಸಂಚಾರ ಭೀತಿ

ಮಂಜೇಶ್ವರ: : ಹೊಸಂಗಡಿ ರೈಲ್ವೇಗೇಟ್ ಮೂಲಕ ಹಾದುಹೋ ಗುವ ಮಂಜೇಶ್ವರ ಒಳರಸ್ತೆಯಲ್ಲಿ ಬೃಹತ್ ಮರಗಳು ರಸ್ತೆಗೆ ಬಾಗಿಕೊಂ ಡಿದ್ದು ವಾಹನ ಸವಾರಲ್ಲಿ ಆತಂಕ ಉಂಟುಮಾಡುತ್ತಿದೆ. ಮಂಜೇಶ್ವರ ಚರ್ಚ್ ಬಳಿಯಿಂದ ಬ್ಲೋಕ್ ಪಂಚಾಯತ್ ಜಂಕ್ಷನ್ ತನಕದ ಎರಡು ಬದಿಯಲ್ಲಿ ಬೃಹತ್ ಗಾತ್ರದ 20ರಷ್ಟು ಮರಗಳ ರೆಂಬೆಗಳು ಅಲ್ಲಲ್ಲಿ ರಸ್ತೆಗೆ ಬಾಗಿಕೊಂಡಿರುದರಿAದ ವಾಹನ ಸಂಚಾರಕ್ಕೆ ಆತಂಕ ಉಂಟಾ ಗಿದೆ. ಮಳೆ, ಗಾಳಿಗೆ ಮುರಿದು ಬೀ ಳುವ ಸಾಧ್ಯತೆ ಇದೆ ಎಂದು ಸಾರ್ವ ಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ಪರಿಸರದಿಂದ ಪ್ರಮುಖ ವಿದ್ಯುತ್ ತಂತಿಗಳು ಹಾದುಹೋಗಿದೆ. ಮರದ ರೆಂಬೆ ಮುರಿದು ಬಿದ್ದಲ್ಲಿ ಹಲವಾರು ವಿದ್ಯುತ್ ಕಂಬ ಸಹಿತ ತಂತಿ ಹಾನಿಗೀಡಾಗಿ ಅನಾಹುತÀ ಸಂಭವಿಸಬಹುದಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಹಳೇಯ ಕಾಲದ ಈ ಮರಗಳು ಯಾವುದೇ ಕ್ಷಣದಲ್ಲಿ ಮುರಿದು ಬೀಳಬಹುದಾದ ಸ್ಥಿತಿಯಲ್ಲಿ ಕಂಡು ಬರುತ್ತಿದೆ. ವಿವಿಧ ಸರಕಾರಿ ಕಚೇರಿ ಗಳು, ಶಾಲೆಗಳು, ಆರಾಧಾನಾಲ ಯಗಳು, ರೈಲ್ವೇ ನಿಲ್ದಾಣ ಹಾಗೂ ಉದ್ಯಾವರ, ಹೊಸಂಗಡಿ ಮೊದಲಾದ ಪ್ರದೇಶಗಳಿಗೆ ತೆರಳುವ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಅಪಾಯ ಆಹ್ವಾನಿಸುವ ಮರದ ರೆಂಬೆಗಳನ್ನು ಕಡಿದು ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page