ಕಾಸರಗೋಡು:ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಲಾಟರಿ ಮಾರಾಟಗಾರ ಮೃತಪಟ್ಟರು. ಚೌಕಿ ಕಾವುಗೋಳಿ ಶ್ವೇತ ನಿವಾಸ್ನ ದಿ| ಆನಂದ ಎಂಬವರ ಪುತ್ರ ಲೋಕೇಶ್ (42) ಮೃತಪಟ್ಟ ದುರ್ದೈವಿ. ಇವರು ವಿದ್ಯಾನಗರ ಜಿಲ್ಲಾ ಕೈಗಾರಿಕಾ ಕೇಂದ್ರ ಸಮೀಪ ಲಾಟರಿ ಸ್ಟಾಲ್ ನಡೆಸುತ್ತಿದ್ದರು. ಒಂದು ತಿಂಗಳ ಹಿಂದೆ ಇವರು ಸಂಚರಿಸುತ್ತಿದ್ದ ಸ್ಕೂಟರ್ ಮಂಗಲ್ಪಾಡಿ ಶಾಲೆ ಸಮೀಪ ರಸ್ತೆಯಲ್ಲಿ ಮಗುಚಿಬಿದ್ದು ಇವರು ಗಂಭೀರ ಗಾಯಗೊಂ ಡಿದ್ದರು. ಇದರಿಂದ ಎರಡು ವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದ್ದರು. ಅನಂತರ ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ಬಿಡುಗಡೆಗೊಂಡು ಮನೆಗೆ ತೆರಳಲಿದ್ದಂತೆಯೇ ನಿಧನ ಸಂಭವಿಸಿದೆ. ಮೃತರು ತಾಯಿ ಜಾನಕಿ, ಪತ್ನಿ ದೀಪಿಕ,ಸಹೋದರರಾದ ಕಿರಣ್, ನವೀನ್, ಸಹೋದರಿ ಶ್ವೇತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






