ಮೀನು ಮಾರಾಟ ಶೆಡ್‌ನಿಂದ 160ರಷ್ಟು ಪೆಟ್ಟಿಗೆ ಕಳವು: ಆರೋಪಿ ಸೆರೆ

ಕಾಸರಗೋಡು: ಚಟ್ಟಂ ಚಾಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮೀನು ಮಾರಾಟ ಮಾಡುವ  ಶೆಡ್‌ನಲ್ಲಿ ತೆಗೆದಿರಿಸಿದ್ದ ಒಂದೂ ಮುಕ್ಕಾಲು ಲಕ್ಷಕ್ಕೂ ಹೆಚ್ಚು ಮೌಲ್ಯದ 160ರಷ್ಟು ಮೀನಿನ ಪೆಟ್ಟಿಗೆಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸೆರೆ ಹಿಡಿಯಲಾಗಿದೆ. ಉದುಮ ಬಂಗರಕುನ್ನುನ ಸಿ.ಎ. ಸಲೀಂ (41) ನನ್ನು ಮೇಲ್ಪರಂಬ ಪೊಲೀಸರು ಸೆರೆ ಹಿಡಿದಿದ್ದಾರೆ. ಚಟ್ಟಂಚಾಲ್‌ನ ಟಿ.ಎಸ್. ರಹೀಂರ ದೂರಿನಂತೆ ಕೇಸು ದಾಖಲಿಸಿದ ಪೊಲೀಸರು ಗಂಟೆಗಳೊಳಗೆ ಆರೋಪಿಯನ್ನು ಸೆರೆಹಿಡಿದಿದ್ದಾರೆ.

೪೦ ಪೆಟ್ಟಿಗೆಗಳನ್ನು ನಿನ್ನೆ ಹಾಗೂ ಉಳಿದವುಗಳನ್ನು ಅದರ ಮುಂಚಿನ ದಿನಗಳಲ್ಲಿ ಕಳವು ನಡೆಸಲಾಗಿದೆ. ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸಿದ್ದರು. ಅಲ್ಲದೆ ದೂರುದಾರ ಆರೋಪಿಯ ಬಗ್ಗೆ ಸೂಚನೆಯನ್ನು ಕೂಡಾ ನೀಡಿದ್ದರು. ಆರೋಪಿ ಯನ್ನು ಇಂದೇ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.

RELATED NEWS

You cannot copy contents of this page