ನಿವೃತ್ತ ಸಾರಿಗೆ ಅಧಿಕಾರಿ ಮನೆಯಿಂದ 13 ಕಿಲೋ ಚಿನ್ನಾಭರಣ, ಒಂದೂವರೆ ಕೋಟಿ ರೂ. ವಶ

ಲಕ್ನೋ: ಅಸಿಸ್ಟೆಂಟ್ ರೀಜಿನಲ್ ಟ್ರಾನ್ಸ್ ಪೋರ್ಟ್ ಆಫೀಸರ್ ಆಗಿದ್ದ ವ್ಯಕ್ತಿಯ ಮನೆಯಿಂದ 13 ಕಿಲೋ ಚಿನ್ನ ಹಾಗೂ ಒಂದೂವರೆ ಕೋಟಿ ರೂಪಾಯಿಗಳನ್ನು  ವಿಜಿಲೆನ್ಸ್ ಅಧಿಕಾರಿಗಳು ವಶಪಡಿಸಿಕೊಂ ಡಿದ್ದಾರೆ. ಉತ್ತರಪ್ರದೇಶದ ಆಗ್ರಾ ಎಆರ್‌ಟಿಒ ಆಗಿದ್ದ ಲಲಿತ್ ಕುಮಾರ್ ಎಂಬವರ ಮನೆಯಿಂದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಹಣವನ್ನು ವಶಪಡಿಸಲಾಗಿದೆ. ಇವುಗಳನ್ನು ಮನೆಯ ಗೋಡೆ ಹಾಗೂ ಪೀಠೋಪಕರಣಗಳ ಮಧ್ಯೆ ಗುಪ್ತ ಕಪಾಟು ನಿರ್ಮಿಸಿ ಅದಕ್ಕೆ ಡಿಜಿಟಲ್ ಲಾಕರ್ ಅಳವಡಿಸಿ ಬಚ್ಚಿಡಲಾಗಿತ್ತು.  ಗೋಡೆ ಹಾಗೂ ಪೀಠೋಪಕ ರಣಗಳಲ್ಲಿ ಗುಪ್ತವಾಗಿ  ಕಪಾಟುಗಳನ್ನು ನಿರ್ಮಿಸಿರು ವುದನ್ನು  ಲಲಿತ್ ಕುಮಾರ್ ಕುಟುಂಬ ಸದಸ್ಯರಲ್ಲಿ ಹೇಳಿರಲಿಲ್ಲವೆನ್ನಲಾಗಿದೆ.  ಲಲಿತ್ ಕುಮಾರ್‌ರ ಮನೆಯಲ್ಲಿ ಅನಧಿ ಕೃತವಾಗಿ ನಗ-ನಗದು ಬಚ್ಚಿಡಲಾಗಿ ದೆಯೆಂಬ ಮಾಹಿತಿ ಲಭಿಸಿದ ಹಿನ್ನೆಲೆ ಯಲ್ಲಿ  ಉತ್ತರಪ್ರ ದೇಶದ ವಿಜಿಲೆನ್ಸ್ ಅಧಿಕಾರಿಗಳು ನ್ಯಾಯಾಲಯದ ಅನು ಮತಿಯೊಂ ದಿಗೆ ಮನೆಗೆ ದಾಳಿ ನಡೆಸಿ ದ್ದರು.  ಬಳಿಕ ನಡೆಸಿದ ತಪಾಸಣೆಯಲ್ಲಿ ಭಾರೀ ಪ್ರಮಾಣದ ಚಿನ್ನ ಹಾಗೂ ಹಣ ಪತ್ತೆಯಾಗಿದೆ. ಅನಧಿಕೃತವಾಗಿ ಸೊತ್ತು ಸಂಪಾದಿಸಿದ ಬಗ್ಗೆ ಲಲಿತ್ ಕುಮಾರ್ ವಿರುದ್ಧ ಈ ಹಿಂದೆಯೂ ಆರೋಪ ಕೇಳಿಬಂದಿತ್ತೆನ್ನಲಾಗಿದೆ. 

ಮನೆಯೊಳಗೆ ಡಿಜಿಟಲ್ ಲಾಕರ್ ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳನ್ನು ತರೆಯುವಂತೆ ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದಾಗ ಲಲಿತ್ ಕುಮಾರ್ ಅದಕ್ಕೆ ಮುಂದಾಗಿಲ್ಲವೆನ್ನಲಾಗಿದೆ. ಅನಂತರ ಸೈಬರ್ ತಜ್ಞರ ಸಹಾಯ ದೊಂದಿಗೆ  ಲಾಕರ್ ತೆರೆದು ನೋಡಿದಾಗ ಅದರೊಳಗೆ ಹಣ, ಚಿನ್ನ, ಬೆಳ್ಳಿ ಆಭರಣಗಳು ಪತ್ತೆಯಾಗಿದೆ. ಲಲಿತ್ ಕುಮಾರ್‌ನ ಸಂಬಂಧಿಕರ ಹೆಸರಲ್ಲೂ ಉತ್ತರಪ್ರದೇಶದ ವಿವಿಧ ಭಾಗಗಲ್ಲಿ ಭಾರೀ ಪ್ರಮಾಣದಲ್ಲಿ ಸೊತ್ತು ಸಂಪಾದಿಸಿ ಬಚ್ಚಿಟ್ಟಿರುವುದಾಗಿಯೂ  ತಿಳಿದುಬಂದಿದೆ. 

RELATED NEWS

You cannot copy contents of this page