ಕಲ್ಲಿಕೋಟೆ: ಎಂಡಿಎಂಎ ಮಾರಾಟ ಹಾಗೂ ಆರ್ಥಿಕ ವ್ಯವಹಾರದಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅಧ್ಯಾಪಿಕೆ ಯರನ್ನು ರಾಜ್ಯಶಿಕ್ಷಣ ಇಲಾಖೆ ಹುದ್ದೆಯಿಂದ ತಕ್ಷಣ ವಜಾಗೈದಿದೆ. ಪೇರಾಂಬ್ರ ಮರುತ್ತೊರಗದ ನಿವಾಸಿ ಕೀರ್ತನ (28) ಮತ್ತು ಕೂರಾಚುಂಡು ಚೆರುಕ್ಕಾಡಿನ ಕಾವ್ಯ(29) ಎಂಬವರು ವಜಾಗೈಯ್ಯಲ್ಪಟ್ಟ ಅಧ್ಯಾಪಿಕೆಯರು. ಸಮಗ್ರಶಿಕ್ಷಾ ಕೇರಳ ಯೋಜನೆಯಂತೆ ಈ ಇಬ್ಬರು ಪೇರಾಂಬ್ರ ಬಿಅರ್‌ಸಿ ಸ್ಪೆಷಲಿಸ್ಟ್ ಎಜ್ಯುಕೇಟರ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಇತ್ತೀಚೆಗೆ ನೇಮಕಗೊಂ ಡಿದ್ದರು. ಎಂಡಿಎಂಎಯೊಂದಿಗೆ ಪೊಲೀಸರು ದಿನಗಳ ಹಿಂದೆ ವಡಗರ ನಿವಾಸಿಯಾದ ಯುವಕನನ್ನು ಬಂಧಿಸಿದ್ದರು. ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ದಂಧೆಯಲ್ಲಿ ಅಧ್ಯಾಪಿಕೆಯರಾದ ಕಾವ್ಯ ಮತ್ತು ಕೀರ್ತನ ಒಳಗೊಂಡಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದರಂತೆ ಜುಲೈ 11ರಂದು ಪೊಲೀಸರು ಮೊದಲು ಕೀರ್ತನಳನ್ನು ಬಂಧಿಸಿದ್ದರು. ಆಕೆಯ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪರಿಶೀಲಿಸಿದಾಗ ಕಾವ್ಯ ಅದರ ಕೊಂಡಿಯಾಗಿರುವ ಮಾಹಿತಿ ಲಭಿಸಿತ್ತು.
ಎಂಡಿಎಂಎ ಅಗತ್ಯವಿರುವವರು ಹಣವನ್ನು ಮುಂಗಡವಾಗಿ ಕೀರ್ತನಳ ಬ್ಯಾಂಕ್ ಖಾತೆಗೆ ಕಳುಹಿಸಿ ಕೊಡುತ್ತಿದ್ದರು. ಹೀಗೆ ಮುಂಗಡವಾಗಿ ಹಣ ಪಾವತಿಸುವವರಿಗೆ ಈ ದಂಧೆಯವರು ಮಾಲು ತಂದ ನೀಡುವ ಲೊಕೇಶನ್ ಫೋನ್ ಮೂಲಕ ಅವರಿಗೆ ತಿಳಿಸುತ್ತಿವೆ. ಅದರಂತೆ ನಂತರ ಬೇರೆ ವ್ಯಕ್ತಿಗಳ ಮೂಲಕ ಆ ಲೊಕೇಶನ್‌ಗೆ ಎಂಡಿಎಂಎ ಕಳುಹಿಸಿಕೊಟ್ಟು ಅದನ್ನು ಹಣ ನೀಡುವವರಿಗೆ ಹಸ್ತಾಂತರಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.







