ಕೊಳವೆ ಯಂತ್ರ ಒಳಗೊಂಡ ಲಾರಿ ಮನೆಮೇಲೆ ಬಿದ್ದು ಇಬ್ಬರು ಕಾರ್ಮಿಕರ ದಾರುಣ ಸಾವು: ಮನೆಯವರು ಪವಾಡ ಸದೃಶ್ಯ ಪಾರು

ಕಾಸರಗೋಡು: ಕೊಳವೆ ಬಾವಿ ಯಂತ್ರ ಒಳಗೊಂಡ  ವಾಹನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದು ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ವೆಸ್ಟ್ ಎಳೇರಿ ವರಕ್ಕಾಟ್‌ನಲ್ಲಿ ಇಂದು ಮುಂಜಾನೆ ನಡೆದಿದೆ.

ವಾಹನದಲ್ಲಿದ್ದ ಕಾರ್ಮಿಕರಾದ ಮಧ್ಯಪ್ರದೇಶ ನಿವಾಸಿ  ದೇವೇಂದ್ರ ಮತ್ತು  ಛತ್ತೀಸ್‌ಗಡ್ ನಿವಾಸಿ ಮುನಾಸರ್  ಸಾವನ್ನಪ್ಪಿದ ದುರ್ದೈವಿಗಳು.  ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೊಳವೆ ಯಂತ್ರ ಅಳವಡಿಸಿದ ವಾಹನ ಇಂದು ಮುಂಜಾನೆ ವೆಸ್ಟ್ ಎಳೇರಿ ವರಕ್ಕಾಟ್ ತಿರುವಿನ ಇಳಿಜಾರು ರಸ್ತೆ ಯಲ್ಲಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ  ಜೈಸನ್  ಎಂಬವರ ಕುಟುಂಬ  ವಾಸಿಸುತ್ತಿರುವ ಮನೆಯ ಟೆರೆಸ್ ಮೇಲೆ ಬಿದ್ದಿದೆ. ಆ  ವಾಹನದಲ್ಲಿ ಕ್ರೈನ್ ಅಳವಡಿಸಲಾಗಿತ್ತು. ವಾಹನ ನಿಯಂತ್ರಣ ತಪ್ಪಿ ಮಗುಚಿ ಬೀಳುವ ವೇಳೆ ಅದರಲ್ಲಿದ್ದ ಕ್ರೈನ್ ಮನೆ ಗೋಡೆಗೆ ತಾಗಿ ನಿಂತಿತು. ಅದರಿಂದಾಗಿ ಕೊಳವೆ ಯಂತ್ರ ಮನೆ ಮೇಲೆ ಬೀಳುವುದು ಅದೃಷ್ಟವಶಾತ್ ತಪ್ಪಿಹೋಯಿತು. ಇದರಿಂದಾಗಿ ಮನೆಯವರು ಸಂಭಾವ್ಯ ಅನಾಹುತದಿಂದ ಪಾರಾದರು.  ಮನೆಗೂ ಭಾರೀ ಹಾನಿಯುಂಟಾಗಿದ್ದು, ಅಪಘಾತ ದಲ್ಲಿ ಸಾವನ್ನಪ್ಪಿದ ಕಾರ್ಮಿಕರಿಬ್ಬರ ಮೃತದೇಹವನ್ನು   ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

You cannot copy contents of this page