ಬದಿಯಡ್ಕ: ಪಂಚಾಯತ್‌ನ ಕನ್ನೆಪ್ಪಾಡಿಯಲ್ಲಿ ಫ್ರೆಂಡ್ಸ್ ಆಟೋ ಸ್ಟಾಂಡ್‌ನ ಉದ್ಘಾಟನೆ ಜರಗಿತು. ಪಂ. ಅಧ್ಯಕ್ಷ ಶಂಕರ ಡಿ. ನಾಮಫಲಕ ಅನಾವರಣಗೊಳಿಸಿ ಮಾತನಾಡುತ್ತಾ ನಾಡಿನ ಸುಸ್ಥಿತಿಯನ್ನು ಕಾಯುವಲ್ಲಿ ಕನ್ನೆಪ್ಪಾಡಿಯ ಆಟೋಚಾಲಕರು ಮಾದರಿಯಾಗಿದ್ದಾರೆ. ಪಂ. ಹಾಗೂ ಸಾರಿಗೆ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸಿ ಚಾಲಕರು ನಾಡಿನ ಜನತೆಯ ಸೇವೆಯನ್ನು ಮಾಡುವುದರೊಂದಿಗೆ ಸಮಾಜಮುಖಿಯಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು. ಸದಸ್ಯ ಗಂಗಾಧರ ಗೋಳಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲೋಕ್ ಪಂ.ಸದಸ್ಯ ಮಹೇಶ್ ವಳಕ್ಕುಂಜ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಸದಸ್ಯರಾದ ಶ್ಯಾಮಪ್ರಸಾದ ಮಾನ್ಯ, ಬಿಂಧ್ಯಾ ನೀರ್ಚಾಲು, ಶ್ಯಾಮಪ್ರಸಾದ ಸರಳಿ, ಪ್ರಮುಖರಾದ ಮದನ ಮಾಡತ್ತಡ್ಕ, ಅಬ್ಬಾಸ್ ನಿಡುಗಳ ಪಾಲ್ಗೊಂಡಿದ್ದರು. ಫ್ರೆಂಡ್ಸ್ ಆಟೋ ಸ್ಟಾಂಡ್‌ನ ಸಂಚಾಲಕ, ಹಿರಿಯ ಚಾಲಕ ವಸಂತ ಕುಮಾರ್ ಪಂ.ಅಧ್ಯಕ್ಷರನ್ನು ಅಭಿನಂದಿಸಿದರು. ಕಾರ್ಯದರ್ಶಿ ವಿಜಯಕುಮಾರ್ ಉರ್ಮಿ ನಿರೂಪಿಸಿದರು. ಫ್ರೆಂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ಶಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೋಶಾದಿsಕಾರಿ ಸುರೇಶ್ ನಿಡುಗಳ ವಂದಿಸಿದರು.







