ಧರ್ಮತ್ತಡ್ಕ: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ, ಮಂಗಳ ಗಂಗೋತ್ರಿ ಇದರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಾಸರಗೋಡು ಜಿಲ್ಲಾ ಮಟ್ಟದ ‘ಕನಕ ಚಿಂತನೆ ಪ್ರಸಾರ ಮಾಲಿಕೆ – ಕನಕಾಭಿಯಾನ’ ಕಾರ್ಯಕ್ರಮ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ನೇರೋಳು ಸುಬ್ಬಣ್ಣ ಭಟ್ ಸಭಾಂಗಣದಲ್ಲಿ ನಡೆಯಿತು.
ಶಾಲಾ ಪ್ರಬಂಧಕ ಶಂಕರ ನಾರಾಯಣ ಭಟ್ ಉದ್ಘಾಟಿಸಿ, ಕನಕದಾಸರ ಆದರ್ಶಗಳು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ದಾರಿದೀಪವಾಗಿದ್ದು, ಅವರ ವಿಚಾರ ಧಾರೆಗಳನ್ನು ಯುವಜನತೆಗೆ ತಲುಪಿ ಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಸತೀಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಸಾಹಿತ್ಯ, ಸಂಸ್ಕೃತಿ ಹಾಗೂ ಮೌಲ್ಯಾ ಧಾರಿತ ಬದುಕಿನತ್ತ ಮುಖಮಾಡಲು ಕನಕದಾಸರ ಚಿಂತನೆಗಳು ಪ್ರೇರಣೆ ಯಾಗಲಿ ಎಂದು ಹಾರೈಸಿದರು.
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬಳೆ ಆಶಯ ನುಡಿದರು. ಮುಖ್ಯೋಪಾಧ್ಯಾಯ ಶಶಿಕುಮಾರ್. ಪಿ., ಕಾಸರಗೋಡು ಜಿಲ್ಲಾ ಕನಕಾಭಿ ಯಾನದ ಸಂಯೋಜಕಿ ರಾಜಶ್ರೀ ಟಿ. ರೈ, ಪೆರ್ಲ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲ ಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾರ್ಥಿ ಸಾಯಿಸುಮಾ ನಾವಡ ಕಾರಿಂಜ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿ ಗಾಗಿ ರಸಪ್ರಶ್ನೆ ಸ್ಪರ್ಧೆ ನಡೆಸಲÁಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಧ್ಯಾಪಿಕೆ ಶ್ವೇತಾಕುಮಾರಿ ಎಂ. ಸ್ವಾಗತಿಸಿ, ಅಧ್ಯಾಪಿಕೆ ನಿವೇದಿತಾ ವಂದಿಸಿದರು. ಶಿಕ್ಷಕ ಸುಜಿತ್ ಕುಮಾರ್ ನಿರೂಪಿಸಿದರು.






