ಹಾಡಹಗಲೇ ಆಟೋಚಾಲಕನ ಮನೆಯಿಂದ ಚಿನ್ನಾಭರಣ ಕಳವು

ಮುಳ್ಳೇರಿಯ: ಹಾಡಹಗಲೇ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳರು ಏಳೂವರೆ ಪವನ್ ಚಿನ್ನಾಭರಣ ದೋಚಿದ್ದಾರೆ. ಆದೂರು ಬಳ್ಳಕ್ಕಾಡ್‌ನ ಆಟೋಚಾಲಕ ಸದಾನಂದ ಎಂಬವರ ಮನೆಯಿಂದ ನಿನ್ನೆ ಹಾಡಹಗಲೇ ಕಳವು ನಡೆದಿದೆ. ಸದಾನಂದ ಆಟೋರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದರು.  ದಾದಿಯಾಗಿರುವ ಇವರ ಪತ್ನಿ ಆಸ್ಪತ್ರೆಗೆ, ಪುತ್ರ ತರಗತಿಗೆ ತೆರಳಿದ್ದ ವೇಳೆ ಮನೆಗೆ ಕಳ್ಳರು ನುಗ್ಗಿದ್ದಾರೆ. ಸದಾನಂದ ಮನೆಗೆ ತಲುಪಿದಾಗಲೇ ಮನೆಯಿಂದ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟು ಮುರಿದು ಅದರಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಈ ಬಗ್ಗೆ ಸದಾನಂದ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದಾರೆ.

RELATED NEWS

You cannot copy contents of this page