ಹೊಸ ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಸನ್‌ಶೇಡ್‌ನಲ್ಲಿ ಬೆಳೆಯುತ್ತಿರುವ ಆಲದ ಮರ: ಕಟ್ಟಡಕ್ಕೆ ಬೆದರಿಕೆ

ಕಾಸರಗೋಡು: ಕೋಟ್ಯಂತರ ರೂ. ಉಪಯೋಗಿಸಿ ನಿರ್ಮಿಸಿದ ಹಾಗೂ ನಗರಸಭೆಗೆ ಪ್ರತೀ ತಿಂಗಳು ಆದಾಯ ತರುತ್ತಿರುವ ಕಾಸರಗೋಡು ಹೊಸ ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಅಪಾಯಕರವಾದ ಸ್ಥಿತಿಗೆ ಸಾಗುತ್ತಿದೆ. ಶಾಪಿಂಗ್ ಕಾಂಪ್ಲೆಕ್ಸ್‌ನ ಮೇಲಿನ ಮಹಡಿಯ ಸನ್‌ಶೇಡ್‌ಗೆ ಹೊಂದಿಕೊಂಡು ಆಲದಮರವೊಂದು ಬೆಳೆಯುತ್ತಿದೆ. ಕಳೆದ ೧೦ ವರ್ಷಕ್ಕಿಂತ ಹೆಚ್ಚಾಗಿ ಈ ಮರ ಇಲ್ಲಿ ಬೆಳೆಯುತ್ತಿದೆ. ಈ ರೀತಿಯ ಸಂದರ್ಭಗಳಲ್ಲಿ ಅದನ್ನು ಚಿತ್ರ ಸಹಿತ ‘ಕಾರವಲ್’ ಪ್ರಕಟಿಸಿತ್ತು. ಪತ್ರಿಕೆಯ ಸುದ್ದಿಯ ಬೆನ್ನಲ್ಲೇ ನಗರಸಭೆ ಮರವನ್ನು ಅದರ ಬುಡದಿಂದಲೇ ಕಡಿದು ತೆರವುಗೊಳಿಸಿದ್ದರು.

ಈ ರೀತಿಯಲ್ಲಿ ತೆರವುಗೊಳಿಸುವ ಮರದ ಬುಡದಿಂದ ಮರ ಮತ್ತೆ ಚಿಗುರಿ ಬೆಳೆಯುತ್ತಿದೆ.  ಸಾಮಾನ್ಯವಾಗಿ ಕಾಂಕ್ರೀಟ್ ಹಾಗೂ ಸಿಮೆಂಟ್‌ನ ಒಳಗೆ ಮರದ ಬೇರುಗಳಿಗೆ ನುಸುಳಲು ಸಾಧ್ಯವಿಲ್ಲ. ಆದರೆ ನಿರ್ಮಾಣದಲ್ಲಿನ ಕಳಪೆ ಕಾಮಗಾರಿ  ಕಾಂಕ್ರೀಟ್ ಹಾಗೂ ಸಿಮೆಂಟ್‌ನೊಳಗೆ ಮರದ ಬೇರುಗಳು ನುಸುಳಲು ಸಾಧ್ಯವಾದ ಸ್ಥಿತಿಯಲ್ಲಿರಬೇಕು ಎಂದು ಶಂಕಿಸಲಾಗುತ್ತಿದೆ. ಈ ರೀತಿಯಲ್ಲಿರುವ ಕಟ್ಟಡಗಳು ಬೇಗನೇ ನಾಶವಾಗಲು ಸಾಧ್ಯತೆ ಇದ್ದು, ಈ ಮರವನ್ನು ಪೂರ್ಣವಾಗಿ ತೆರವುಗೊಳಿಸದಿದ್ದರೆ ಶಾಪಿಂಗ್ ಕಾಂಪ್ಲೆಸ್‌ಗೆ ಅಪಾಯ ತಪ್ಪಿದ್ದಲ್ಲವೆಂದು ಹೇಳಲಾಗುತ್ತಿದೆ.

You cannot copy contents of this page