ಕಾಸರಗೋಡು: ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘ ಆಶ್ರಯದಲ್ಲಿ ಅಭಿನಂದನೆ ಹಮ್ಮಿಕೊಳ್ಳಲಾಯಿತು. ಉಪ್ಪಳ ಅಂಬಾರು ಮಲರಾಯ ದೈವಸ್ಥಾನದ ಟ್ರಸ್ಟಿ ವೀರಪ್ಪ ಅಂಬಾರು ಉದ್ಘಾಟಿಸಿದರು. ಬಿಲ್ಲವ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಕೆ. ಕಮಲಾಕ್ಷ ಸುವರ್ಣ ಅಧ್ಯಕ್ಷತೆ ವಹಿಸಿದರು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಸಮಾಜದ ಗಣ್ಯ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಾಸರಗೋಡು ನಗರಸಭಾ ಕೌನ್ಸಿಲರ್ ಕೆ.ಆರ್, ಹರೀಶ್, ಅಶೋಕ್ ಬಾಡೂರು, ಕೆ. ಸರೋಜಿನಿ, ಚಂದ್ರಶೇಖರ ಚಿಪ್ಲಿಕೋಟ, ಕೆ. ಸುರೇಶ್ ಸುವರ್ಣ, ಲವ ಮೀಪುಗುರಿ, ಕೆ. ಶಿವ, ನಾರಾಯಣ ಕೊರಕ್ಕೋಡು, ವಸಂತಿ ಟೀಚರ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಕೆ. ಭಾಸ್ಕರ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ರವಿ ಕೋಟೆಕಾರ್ ವಂದಿಸಿದರು.







