ಕಾಸರಗೋಡು: ತೀವ್ರ ಸಮುದ್ರ ಕೊರೆತದಿಂದಾಗಿ ಕೃಷಿ ಬೆಳೆಗಳು, ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡ ಮೀನುಗಾರರಿಗೆ ಮತ್ತು ಇತರ ಕರಾವಳಿ ನಿವಾಸಿಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. ಬಿಜೆಪಿ ಕುಂಬಳೆ ಮಂಡಲ ಸಮಿತಿ ಹಾಗೂ ಶಾರದಾ ನಗರ ಸಂರಕ್ಷಣಾ ಕ್ರಿಯÁಸಮಿತಿಯ ಜಂಟಿ ಆಶ್ರಯದಲ್ಲಿ ಕಾಸರಗೋಡು ಕಲೆಕ್ಟರೇಟ್ಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ವರ್ಷ ಶಾಸಕರು, ಜನಪ್ರತಿ ನಿಧಿಗಳು ಮತ್ತು ಕಲೆಕ್ಟರ್ ಸೇರಿದಂತೆ ಅಧಿಕಾರಿಗಳು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರೂ, ಪರಿಹಾರ ಭರ ವಸೆಗಳಿಗೆ ಮಾತ್ರ ಸೀಮಿತಗೊಳ್ಳುತ್ತಿವೆ. ಸಂತ್ರಸ್ತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ದೊರೆಯುತ್ತಿಲ್ಲ ಎಂದು ಅಶ್ವಿನಿ ಆರೋಪಿಸಿದರು.
ಮುಸೋಡಿಯಿಂದ ಶಿರಿಯª Àರೆಗಿನ ಕರಾವಳಿ ಪ್ರದೇಶದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮುದ್ರ ತಡೆಗೋಡೆ ನಿರ್ಮಿಸುವುದು, ಕೃಷಿ ನಾಶ ಸೇರಿದಂತೆ ನಷ್ಟಗಳಿಗೆ ತಕ್ಷಣದ ಆರ್ಥಿಕ ನೆರವು ನೀಡುವುದು, ಮನೆಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವುದು ಮುಂತಾದ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅಶ್ವಿನಿ ಎಚ್ಚರಿಕೆ ನೀಡಿದರು.
ಶಾರದಾ ನಗರ ಕರಾವಳಿ ಕ್ರಿಯÁಸಮಿತಿಯ ಅಧ್ಯಕ್ಷ ಶಶಿಕಾಂತ್ ಕಡಪ್ಪುರಂ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ಕುಂಬಳೆ ಮಂಡಲ ಅಧ್ಯಕ್ಷ ಬಿ. ವಿಕ್ರಮ್ ಪೈ, ಮೀನುಗಾರರ ಮುಖಂಡ ಸುರೇಶ್ ಕೀಯೂರ್ ಮಾತನಾಡಿದರು. ಶಾರದಾ ಭಜನಾ ಮಂದಿರದ ಅಧ್ಯಕ್ಷ ಜನಾರ್ದನ ಮೊಗವೀರಪಟ್ಟಣ, ವಾಮಂಜೂರು ಗುತ್ಯಮ್ಮ ಭಗವತಿ ಕ್ಷೇತ್ರದ ಅಧ್ಯಕ್ಷ ಆನಂದ ಎಸ್ ಐಲ್, ಕಾರ್ಯದರ್ಶಿ ರಮೇಶ್ ಎಸ್ ಐಲ್, ಮಲ್ಲಿಕಾ ಕಾವುಗೋಳಿ, ಐಲ ಬೋವಿಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಿನೇಶ್ ಎಸ್. ಐಲ್ ಹಾಗೂ ನೇತಾರರಾದ ರಾಧಾಕೃಷ್ಣ ರೈ ಮಡ್ವ, ರಂಜಿತ್ ಶಾರದಾ ನಗರ, ರಘು ಸಿ ಚೆರುಗೋಳಿ, ಮನೋಜ್ ಕುಮಾರ್ ಐಲ, ರತೀಶ್ ವಿ. ಐಲ ಉಪಸ್ಥಿತರಿ ದ್ದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಸ್ವಾಗತಿಸಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್ ಕೃತಜ್ಞತೆ ಸಲ್ಲಿಸಿದರು.
ನೂರಾರು ಮಹಿಳೆಯರು ಹಾಗೂ ಮೀನುಗಾರರು ಪಾಲ್ಗೊಂ ಡಿದ್ದ ಪ್ರತಿಭ ಟನಾ ಮೆರವಣಿಗೆಯು ಬಿ.ಸಿ. ರೋಡ್ ಜಂಕ್ಷನ್ನಿAದ ಆರಂಭಗೊAಡು ಕಲೆಕ್ಟೆ್ರÃಟ್ನತ್ತ ಸಾಗಿತು. ಕಲೆಕ್ಟÉ್ರÃಟ್ ಮುಂ ಭಾಗದಲ್ಲಿ ಪೊಲೀಸರು ಮೆರವಣಿಗೆಯನ್ನು ತಡೆದರು. ನಂತರ ಬಿಜೆಪಿ ನಾಯಕರು ಹಾಗೂ ಮೀನುಗಾರರ ಪ್ರತಿನಿಧಿಗಳು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.






