ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್ ಸಾವು: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ವರದಿ ಸಲ್ಲಿಸಲು ಎಡಿಎಂಗೆ ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್ ಎ. ಆಶಾಲತಾರ ಸಾವಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಎಡಿಎಂಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದ್ದಾರೆ. ಶುಕ್ರವಾರ ನೌಕರೆ 3 ಪ್ಯಾಕೆಟ್ ಇಲಿವಿಷ ಪೇಸ್ಟ್ ಐಸ್‌ಕ್ರೀಂನಲ್ಲಿ ಮಿಶ್ರಣ ಮಾಡಿ ಸೇವಿಸಿದ್ದರು. ತಾನು ಇಲಿವಿಷ ಸೇವಿಸಿರುವುದು ಮನೆ ಹಾಗೂ ಕಚೇರಿಯಲ್ಲಿ ಏಕಾಂಗಿಯಾಗಿದ್ದೇನೆಂಬ ಚಿಂತನೆಯಿಂದಿರುವ ಮೆಂಟಲ್ ಸ್ಟ್ರೆಸ್ ಕಾರಣದಿಂದಾಗಿ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿರುವುದಾಗಿಯೂ ಇವರು ವಿದ್ಯಾನಗರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತನಗೆ ಯಾರ ವಿರುದ್ಧವೂ ದೂರಿಲ್ಲವೆಂದು, ನಾನು  ಸ್ವ ಇಚ್ಛೆಯಂತೆ ಸಾಯಲು ತೀರ್ಮಾನಿಸಿರು ವುದಾಗಿಯೂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಗಸ್ಟ್ 7ರಂದು ಸಂಬಂಧಿಕರ ಉಪಸ್ಥಿತಿಯಲ್ಲಿ ಚೆಂಗಳದ ಆಸ್ಪತ್ರೆಯಲ್ಲಿ ವಿದ್ಯಾನಗರ ಪೊಲೀಸರು ಹೇಳಿಕೆ ದಾಖಲಿಸಿದ್ದರು. ನೌಕರೆಯ ಸಾವಿನಲ್ಲಿ ವಿದ್ಯಾನಗರ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಕಳೆದ ಮೇ ೧೨ರಿಂದ ಆಶಾಲತಾ ಕಲೆಕ್ಟ್ರೇಟ್‌ನಲ್ಲಿರುವ ಎಂಡೋಸಲ್ಫಾನ್ ಸ್ಪೆಷಲ್ ಸೆಲ್‌ನಲ್ಲಿ ಕರ್ತವ್ಯದಲ್ಲಿದ್ದರು. ಎಂಡೋಸಲ್ಫಾನ್ ಸ್ಪೆಷಲ್ ಸೆಲ್‌ನಲ್ಲಿ ಉತ್ತಮ ರೀತಿಯಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದುದಾಗಿ ಸ್ಪೆಷಲ್ ಸೆಲ್ ಹೊಣೆಯಿರುವ ಅಧಿಕಾರಿ ತಿಳಿಸಿದ್ದಾರೆ.

ಆದಿತ್ಯವಾರ ಮಧ್ಯಾಹ್ನ ಈಕೆ ಕಲ್ಲಿಕೋಟೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ತನಿಖೆಯಿಂದ ತಪ್ಪಿತಸ್ಥರನ್ನು ಪತ್ತೆಹಚ್ಚಲು ಸಾಧ್ಯವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RELATED NEWS

You cannot copy contents of this page