ಎಂಡೋಸಲ್ಫಾನ್ ಸಂತ್ರಸ್ತ ಯುವತಿ ಮೃತ್ಯು

ಕಾಸರಗೋಡು: ಎಂಡೋಸ ಲ್ಫಾನ್‌ನಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು.  ಕಲ್ಲಕಟ್ಟ ಚಿತ್ತಾರಿಕುನ್ನು ಎಂಬಲ್ಲಿನ ಶೇಕ್ ಹಸೀನ (37)  ಮೃತಪಟ್ಟ ದುರ್ದೈವಿ.  ಜನ್ಮತಃ ಅಸೌಖ್ಯ ಬಾಧಿಸಿದ್ದ ಈಕೆಗೆ  ಅನಂತರ ಅರ್ಬುದ ತಗಲಿತ್ತು.  ಅಸೌಖ್ಯ ಉಲ್ಭಣಗೊಂಡು ನಿಧನ ಸಂಭವಿಸಿದೆ.  ಕಾಞಂಗಾಡ್ ನೆಹರೂ ಕಾಲೇಜು ಸಾಹಿತ್ಯ ವೇದಿಕೆಯ ವಸತಿ ನಿರ್ಮಾಣ ಯೋಜನೆಯಲ್ಲಿ ಒಳಪಡಿಸಿ ಹಸೀನರಿಗೆ ಸಿನಿಮಾ ನಟನೂ, ಕೇಂದ್ರ ಸಚಿವರೂ ಆಗಿರುವ ಸುರೇಶ್ ಗೋಪಿ ಮನೆ ಹಸ್ತಾಂತರಿಸಿದ್ದರು.  ಕರೀಂ-ಬಲ್ಕೀಸ್ ದಂಪತಿಯ ಪುತ್ರಿಯಾದ ಮೃತರು ಸಹೋದರ ಅಶ್ರಫ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page