ಉಪ್ಪಳ: ಪ್ರತಾಪನಗರ ಪುಳಿಕುತ್ತಿ ನಿವಾಸಿ ದಿ.ಅಚ್ಚುತ್ತರ ಪತ್ನಿ ಯಶೋಧ [85] ಶುಕ್ರವಾರ ನಿಧನ ಹೊಂದಿದರು. ಮೃತರ ಮಕ್ಕಳಾದ ರಮೇಶ ಕಾಸರಗೋಡು, ಪ್ರಭಾಕರ ಮುಂಬೈ, ಸೊಸೆಯಂದಿರಾದ ವೃಂದ, ಲತಾ, ಅಳಿಯ ಭಾಸ್ಕರ ಕಾಸರಗೋಡು, ಸಹೋದರ ಶ್ರೀನಿವಾಸ ಪ್ರತಾಪನಗರ, ಸಹೋದರಿ ಸುಲೋಚನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪುತ್ರಿ ಕಾರ್ತಾ್ಯಯಿನಿ, ಸಹೋದರರಾದ ದಾಮೋದರ ವೈದ್ಯರ್,ಕುಂಞರಾಮ ವೈದ್ಯರ್, ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದ ಆಡಳಿತ ಸಮಿತಿ, ಉತ್ಸವ ಸಮಿತಿ, ಭಜನಾ ಸಮಿತಿ, ಮಹಿಳಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.







