ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯಲ್ಲಿ ನೂತನ ಎಸ್ಐ ಆಗಿ ಎಸ್.ಅನೂಬ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಆರ್.ಪಿ. ಅನೂಪ್ಕೃಷ್ಣ ಅಧಿಕಾರ ವಹಿಸಿಕೊಂಡಿ ದ್ದಾರೆ. ಎಸ್ಐ ಅನೂಬ್ರನ್ನು ವಿದ್ಯಾನಗರ ಪೊಲೀಸ್ ಠಾಣೆಯಿಂದ ಕುಂಬಳೆಗೆ ವರ್ಗಾಯಿಸಲಾಗಿದೆ. ತಿರುವನಂ ತಪುರ ಕಾಟಾಕಡ ನಿವಾಸಿಯಾದ ಇವರು ಈ ಮೊದಲು ಕಲ್ಲಿಕೋಟೆ, ಪಂದಿರಾಕಾವ್, ಫರೂಕ್ ಠಾಣೆಗಳಲ್ಲಿ ಎಸ್ಐ ಆಗಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡ ಆರ್ಪಿ ಅನೂಪ್ಕೃಷ್ಣ ತಿರುವನಂತಪುರ ಕೊಡಪ್ಪನಕುನ್ನು ನಿವಾಸಿಯಾಗಿದ್ದಾರೆ. ಈ ಹಿಂದೆ ತಿರುವನಂತಪುರ, ಕೋಟ್ಟಯಂ, ಕೊಲ್ಲಂ, ಪತ್ತನಂತಿಟ್ಟ, ಕುಂಬಳೆ ಕರಾವಳಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಬದಿಯಡ್ಕ ಠಾಣೆಯಲ್ಲಿ ನೇಮಕಗೊಂ ಡಿದ್ದರು. ಇನ್ನು ಮುಂದೆ ಇವರಿಗೆ ಬದಿಯಡ್ಕ ಹಾಗೂ ಕುಂಬಳೆ ಠಾಣೆಯ ಹೊಣೆಗಾರಿಕೆ ಇರುವುದು. ಇವರಿಗೆ ಈ ಹಿಂದೆ ಎರಡು ಬಾರಿ ಬ್ಯಾಡ್ಜ್ ಆಫ್ ಆನರ್ ಪುರಸ್ಕಾರ ಲಭಿಸಿತ್ತು. ಬದಿಯಡ್ಕ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡ ಬಳಿಕ ಇಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಿ ಸೆರೆಹಿಡಿಯಲು ಇವರಿಗೆ ಸಾಧ್ಯವಾಗಿದೆ






