ವರ್ಕಾಡಿಯಲ್ಲಿ ವಿಶ್ವಹಿಂದೂ ಪರಿಷತ್‌ನಿಂದ ಪಂಜಿನ ಮೆರವಣಿಗೆ

ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವರ್ಕಾಡಿ ಖಂಡ ಸಮಿತಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪಂಜಿನ ಮೆರವಣಿಗೆ ಸುಂಕದಕಟ್ಟೆ ಅಯ್ಯಪ್ಪ ಭಜನಾ ಮಂದಿರದಿAದ ಹೊರಟು ಮಜೀರ್ಪಳ್ಳ ಪೇಟೆ ತನಕ ನಡೆಯಿತು.ಕಾರ್ಯಕ್ರಮದಲ್ಲಿ ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ, ಕಾಸರಗೋಡು ಜಿಲ್ಲಾ ದುರ್ಗಾವಾಹಿನಿ ಸಂಯೋಜಕಿ ಸೌಮ್ಯ ಪ್ರಕಾಶ್, ವಿಶ್ವ ಹಿಂದೂ ಪರಿಷತ್ ವರ್ಕಾಡಿ ಖಂಡ ಸಮಿತಿಯ ಅಧ್ಯಕ್ಷ ಅಶೋಕ್ ತಾಮಾರ್, ಕಾರ್ಯದರ್ಶಿ ಅಧೀಶ್, ಬಜರಂಗದಳ ಸಂಯೋಜಕ ಹರ್ಷನ್, ಧರ್ಮ ಪ್ರಸಾರ ಪ್ರಮುಖ್ ಜೀವನ್ ನೂಜಿ,ವರ್ಕಾಡಿ ಪಂಚಾಯತ್ ಸದಸ್ಯರು ಚಂದ್ರಶೇಖರ್ ವÀರ್ಕಾಡಿ ,ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ವರ್ಕಾಡಿ ಸ್ವಾಗತಿಸಿದರು. ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ರಂಜಿತ್ ಕೋಡಿಬೈಲ್ ವಂದೇ ಮಾತರಂ ಹಾಡಿ, ನಿರೂಪಿಸಿದರು. ರಾಷ್ಟೀಯ ಸ್ವಯಂ ಸೇವಕ ಸಂಘದ ಕಣ್ಣೂರು ವಿಭಾಗ ಕುಟುಂಬ ಪ್ರಭೋದನ್ ಪ್ರಮುಖ್ ಪುಂಡರಿಕಾಕ್ಷ ಬೆಳ್ಳೂರು ಬೌದ್ಧಿಕ್ ನಡೆಸಿದರು.

You cannot copy contents of this page