ಅಂಗಡಿ ವರಾಂಡದಲ್ಲಿ ಮಧ್ಯವಯಸ್ಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪುತ್ತಿಗೆ: ಬಾಡೂರಿನಲ್ಲಿ  ಮಧ್ಯವಯಸ್ಕನೋರ್ವ ಅಂಗಡಿ ವರಾಂಡದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಅಂಗಡಿಮೊಗರು ದೇಲಂಪಾಡಿಯ ವಿಠಲ ಆಳ್ವ (50) ಮೃತ ವ್ಯಕ್ತಿ ಯಾಗಿದ್ದಾರೆ. ನಿನ್ನೆ ಅಪರಾಹ್ನ  ಬಾಡೂರಿನ  ಉಪೇಕ್ಷಿತ ಕಟ್ಟಡ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ನಾಗರಿಕರು ನೋಡಿ ದಾಗ ಮೃತದೇಹ ಕಂಡು ಬಂದಿದೆ. ಮೂರು ದಿನಗಳ ಹಿಂದೆ ಮೃತಪಟ್ಟಿ ರಬಹುದೆಂದು ಸಂಶಯಿಸಲಾ ಗುತ್ತಿದೆ. ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಬದಿಯಡ್ಕ ಪೊಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ದಿವಂಗತರಾದ ಅಕ್ಕಾಡಿ ಆಳ್ವ-ಮೂಕಾಂಬಿಕಾ ದಂಪತಿಯ ಪುತ್ರನಾದ ಮೃತರು ಸಹೋದರ ಸುಬ್ಬಣ್ಣ ಆಳ್ವ (ಪುತ್ತಿಗೆ ಪಂ. ಮಾಜಿ ಅಧ್ಯಕ್ಷ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
 
 

You cannot copy contents of this page