ಇಡುಕ್ಕಿಯಲ್ಲಿ ಮತ್ತೊಂದು ಭಯಾನಕ ಘಟನೆ: ತಲೆಗೆ ಹೊಡೆದು ತಾಯಿಯ ಕೊಂದ ಪುತ್ರ

ಇಡುಕ್ಕಿ: ತೊಡುಪುಳದಲ್ಲಿ ಪುತ್ರ ತಾಯಿಯನ್ನು ತಲೆಗೆ ಹೊಡೆದು ಕೊಲೆಗೈದ ಘಟನೆ ನಡೆದಿದೆ. ಇಡವೆಟ್ಟಿ ಮೈಲಾಟುಂಪಾರ ವಳಪ್ ನಿವಾಸಿ ರೈಚಲ್ ಜೋಸೆಫ್ ಕೊಲೆಗೀಡಾದ ಮಹಿಳೆ. ಘಟನೆಯಲ್ಲಿ ಪುತ್ರ ಲಿಜೊನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಎಳುಕ್ಕುಂವಯಲ್‌ನಲ್ಲಿ ಹೆತ್ತವರನ್ನು ಪುತ್ರ ಕೊಲೆಗೈದ ಘಟನೆಯ ಆತಂಕ ಮಾಸುವ ಮೊದಲೇ ಜಿಲ್ಲೆಯಲ್ಲಿ ಮತ್ತೊಂದು ದಾರುಣ ಕೊಲೆ ಸಂಭವಿಸಿದೆ. ನಿನ್ನೆ ಸಂಜೆ ೩ ಗಂಟೆ ವೇಳೆಗೆ ಈ ಘಟನೆ ನಡೆದಿದೆ.

ಎರ್ನಾಕುಳಂನಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುವ ರೈಚಲ್ ಜೋಸೆಫ್ ಕಳೆದ ಶುಕ್ರವಾರ ತೊಡುಪುಳಕ್ಕೆ ತಲುಪಿದ್ದರು. ಸಹೋದರನ ಮನೆಯಲ್ಲಿದ್ದ ಇವರು ಧ್ಯಾನಕ್ಕಾಗಿ ತೆರಳುವುದರ ಮುಂಚಿತವಾಗಿ ಪುತ್ರನನ್ನು ಕಾಣಲೆಂದು ನಿನ್ನೆ ಲಿಜೊ ವಾಸಿಸುವ ಮನೆಗೆ ತಲುಪಿದ್ದರು. ಈ ವೇಳೆ ಪುತ್ರನೊಂದಿಗೆ ವಾಗ್ವಾದ ಉಂಟಾಗಿತ್ತು. ಈ ಮಧ್ಯೆ ರೈಚಲ್‌ರ ತಲೆಗೆ ಮರದ ರೀಪ್‌ನಿಂದ ಹೊಡೆದು ಗಾಯಗೊಳಿಸಿದ್ದ ಮರಣ ಸಂಭವಿಸಿದೆ ಎಂದು ಖಚಿತವಾದ ಬಳಿಕ ಅಲ್ಲಿಂದ ತೆರಳಿದ್ದನು. ಲಿಜೊ ಪರಾರಿಯಾಗುತ್ತಿರುವು ದನ್ನು ಕಂಡ ನೆರೆಮನೆ ನಿವಾಸಿ ಸ್ಥಳಕ್ಕೆ ತಲುಪಿ ನೋಡಿದಾಗ ರೈಚಲ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ನಡೆಸಿದ ತನಿಖೆಯಲ್ಲಿ ಲಿಜೊನ ನ್ನು ತೊಡುಪುಳ ಸಮೀಪದಿಂದ ಸೆರೆ ಹಿಡಿಯಲಾಗಿದೆ. ಕೊಲೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಲಿಜೊಗೆ ಮಾನಸಿಕ ಸಮಸ್ಯೆ ಇದ್ದಿರುವುದಾಗಿಯೂ ಶಂಕಿಸಲಾಗಿದೆ.

You cannot copy contents of this page