ನಗರ ಮಧ್ಯದ ಕೆಪಿಆರ್‌ರಾವ್ ರೋಡ್‌ನಲ್ಲಿ ಆಳ ಹೆಚ್ಚುತ್ತಿರುವ ಹೊಂಡಗಳು: ವಾಹನ ಸಂಚಾರಕ್ಕೆ ಸಮಸ್ಯೆ

ಕಾಸರಗೋಡು: ನಗರಸಭೆಯ ಮೂಗಿನ ನೇರ ಕೆಳಗೆ, ನಗರಮಧ್ಯದ ಕೆಪಿಆರ್ ರಾವ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪ್ಪೋ ಸಮೀಪದ ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪ್ಪೋಗೆ ಪ್ರವೇಶಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ತೀವ್ರ ಮಳೆಗೆ ಹೊಂಡಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಳವೂ ದೊಡ್ಡದಾಗುತ್ತಾ ಹೋಗುತ್ತಿದೆ. ಕೆಪಿಆರ್‌ರಾವ್ ರಸ್ತೆ ನಗರದ ಪ್ರಧಾನ ವಾಹನದಟ್ಟಣೆಯಿರುವ ರಸ್ತೆಗಳಲ್ಲೊಂದಾಗಿದೆ. ಬ್ಯಾಂಕ್ ರಸ್ತೆಯ ಸಾರಿಗೆ ತಡೆಯನ್ನು ಹೊರತುಪಡಿಸಲು ಹೆಚ್ಚಿನವರು ಇದೇ ರಸ್ತೆಯನ್ನು ಸಂಚಾರಕ್ಕಾಗಿ ಉಪಯೋಗಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಡಿಪ್ಪೋದಲ್ಲಿ ಬಸ್‌ಗಳ ಪ್ರವೇಶ ಹಾಗೂ ಹೊರ ಹೋಗುವುದು ಆಗುವಾಗ ಸಂಭವಿಸುವ ಸಾರಿಗೆ ತಡೆಯನ್ನು ಹೊರತುಪಡಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹಿಂಭಾಗದಲ್ಲಿರುವ ಕೆಪಿಆರ್‌ರಾವ್ ರಸ್ತೆಯ ಮೂಲಕ ಡಿಪ್ಪೋಗೆ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಈಗ ಬೃಹತ್ ಹೊಂಡಗಳು ಕಂಡು ಬರುತ್ತಿವೆ. ಕೆಪಿಆರ್‌ರಾವ್ ರಸ್ತೆಯ ವಿವಿಧ ಭಾಗಗಳಲ್ಲಿ ರಸ್ತೆ ಬದಿ ಕುಸಿದು ರಸ್ತೆ ಹಾನಿಗೊಳ್ಳಲು ಆರಂಭಿಸಿ ಹಲವು ಸಮಯ ಕಳೆದಿದೆ. ಮಲ್ಟಿ ಸಿನಿಮಾ ಥಿಯೇಟರ್, ಟೆಲಿಕಾಂ ಕಚೇರಿ, ಸಣ್ಣದು ದೊಡ್ಡದಾದ ನೂರಾರು ವ್ಯಾಪಾರ ಸಂಸ್ಥೆಗಳು, ವಾಣಿಜ್ಯ ಕಟ್ಟಡ ಸಮುಚ್ಚಯಗಳು ಎಂಬಿವುಗಳೆಲ್ಲಾ ಈ ಭಾಗದಲ್ಲಿದ್ದು, ಜನದಟ್ಟಣೆ, ವಾಹನದ ಸಂಖ್ಯೆಗಳಲ್ಲಿ ಹೆಚ್ಚಳ ಉಂಟಾಗುತ್ತಿದೆ. ಈ ಮಧ್ಯೆ ರಸ್ತೆ ಹಾನಿಗೊಂಡಿರುವುದು ವಾಹನ ಸಂಚಾರಕ್ಕೆ ಹಾಗೂ ಕಾಲ್ನಡೆ ಪ್ರಯಾಣಿಕರಿಗೆ ಸಂಕಷ್ಟ ತರುತ್ತಿದೆ.

ಕೆಪಿಆರ್‌ರಾವ್ ರೋಡನ್ನು ತುರ್ತಾಗಿ ಕಾಂಕ್ರಿಟೀಕರಣಗೊಳಿಸಲು ವ್ಯಾಪಾರಿಗಳು ಹಾಗೂ ಸ್ಥಳೀಯರು ನಿರಂತರ ಆಗ್ರಹಿಸುತ್ತಿದ್ದಾರೆ. ಪ್ರಸ್ತುತ ಹೊಸ ಶಾಸಕರಾಗಿ ಆಯ್ಕೆಯಾದ ಕಲ್ಲಟ್ರ ಮಾಹಿನ್ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುವರು ಎಂಬ ನಿರೀಕ್ಷೆ ಇಲ್ಲಿನವರಲ್ಲಿದೆ.

RELATED NEWS

You cannot copy contents of this page