ಕೇರಳವನ್ನು ಭಾರತದಿಂದ ಬೇರ್ಪಡಿಸಲು ಗೂಢ ಚಿಂತನೆ- ಪಿ.ಕೆ. ಕೃಷ್ಣದಾಸ್

ಕಾಸರಗೋಡು: ಕೇರಳವನ್ನು ಭಾರತದಿಂದ ಬೇರ್ಪಡಿಸಲಿರುವ ನಿಗೂಢ ಚಿಂತನೆ ನಡೆಯುತ್ತಿರುವುದಾಗಿ ಶಂಸಯಿಸಬೇ ಕಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ನುಡಿದರು. ಬಿಜೆಪಿ ಜಿಲ್ಲಾ ಸಮಿತಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ವಂದೇ ಮಾತರಂ ಸದಸ್ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲೆಲ್ಲಾ ರಾಷ್ಟ್ರಗೀತೆಗೆ ಇಲ್ಲದ ನಿಷೇಧ ಕೇರಳದಲ್ಲಿ ಏರ್ಪಡಿಸಿದ ವಿ.ಡಿ. ಸತೀಶನ್‌ರ ಸರಕಾರದ ಕ್ರಮದಿಂದ ಈ ಸಂಶಯ ಬಲಪಡುತ್ತಿದೆ ಎಂದು ಅವರು ನುಡಿದರು.

೧೯೪೭ರಲ್ಲಿ ಭಾರತದ ವಿಭಜನೆಗೆ ಮುಂಚಿತ ವಂದೇ ಮಾತರಂ ಗೀತೆಯನ್ನು ವಿಭಜಿಸಿರುವುದಕ್ಕೆ ಸಮಾನವಾಗಿದೆ ಈಗಿನ ಯತ್ನ. ಭಾರತ ಸಂಸತ್ತಿನಲ್ಲಿ ಜ್ಯಾರಿಗೊಳಿಸಿದ ಕಾನೂನ ನನ್ನು ರಾಜ್ಯ ಸರಕಾರವೊಂದು ಉಲ್ಲಂ ಘಿಸುತ್ತಿರುವುದು ಸಮಾನತೆಗಳಿಲ್ಲದ ಘಟನೆಯಾಗಿದೆ. ಬಂಗಾಳ ವಿಭಜನೆಯನ್ನು ವಿರೋಧಿಸಲು ಹಿಂದುಗಳು, ಮುಸ್ಲಿಮರು ಒಂದಾಗಿ ಆಲಾಪಿಸಿದ ವಂದೇ ಮಾತರಂ ಗೀತೆ ಈಗ ಹೇಗೆ ನಿಷೇಧಿಸಲ್ಪಟ್ಟ ಗೀತೆಯಾಗಿ ಬದಲಾಗಿರುವುದೆಂದು ವಿ.ಡಿ. ಸತೀಶನ್ ಸ್ಪಷ್ಟಪಡಿಸಬೇಕೆಂದು ಕೃಷ್ಣದಾಸ್ ಆಗ್ರಹಿಸಿದರು. ಮುಸ್ಲಿಂಲೀಗ್‌ನ, ಜಮಾಯತ್ ಇಸ್ಲಾಮಿಯ ದೇಶವಿರುದ್ಧ ಅಜೆಂಡಾಗಳಿಗೆ ಬಗ್ಗಿದ ಸತೀಶನ್ ಸರಕಾರದ ಯತ್ನ ದೇಶಸ್ನೇಹಿಗಳು ಆತಂಕದಿಂದ ನೋಡುತ್ತಿರುವುದಾಗಿ ಅವರು ನುಡಿದರು. ವಂದೇ ಮಾತರಂನ ೧೫೦ನೇ ವಾರ್ಷಿಕದಲ್ಲಿ ಈ ಯತ್ನ ಎಂಬುದು ಅತ್ಯಂತ ನೋವಿನ ವಿಷಯ ವಾಗಿದೆ ಎಂದು ಅವರು ನುಡಿದರು.

ಕೆ.ಎಂ. ಶಾಜಿಯ ಅರಬಿ ಕಡಲಿ ನಾಚೆಗಿನ ತ್ಯಾಜ್ಯ ಚರಂಡಿ ಪರಾಮ ರ್ಶೆಯನ್ನು ಕೃಷ್ಣದಾಸ್ ಖಂಡಿಸಿದರು. ಅಭಿವೃದ್ಧಿ ವಿರುದ್ಧತೆ, ವಿಭಜನ ರಾಷ್ಟ್ರೀಯ ಎರಡು ಒಕ್ಕೂಟಗಳ ಮುಖಮುದ್ರೆಯಾಗಿದೆ ಎಂದು, ಭಾರತವನ್ನು ವಿಭಜಿಸಲು ಕಾಂಗ್ರೆಸ್, ಮುಸ್ಲಿಂ ಲೀಗ್, ಕಮ್ಯುನಿಟಿಸ್ಟ್ ಪಕ್ಷ ಮತ್ತೆ ಒಂದಾಗುತ್ತಿರುವುದಾಗಿಯೂ ಕೃಷ್ಣದಾಸ್ ಆರೋಪಿಸಿದರು. ಬಿಜೆಪಿ ಕರ್ನಾಟಕ ಲೀಗಲ್ ಸೆಲ್ ಸದಸ್ಯೆ ಸಹನಕುಂದರ್ ಮಾತನಾಡಿದರು. ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿ ದರು. ವಿ. ರವೀಂದ್ರನ್, ಸವಿತ ಟೀಚರ್, ರಾಮಪ್ಪ ಮಂಜೇಶ್ವರ, ಎ. ವೇಲಾಯುಧನ್, ಪಿ.ಆರ್. ಸುನಿಲ್, ಮನುಲಾಲ್ ಮೇಲತ್ ಮಾತನಾಡಿದರು.

RELATED NEWS

You cannot copy contents of this page