ಮಡಿಮೊಗರು ಎಂಜಿಎಲ್‌ಸಿ ಕಟ್ಟಡ ಶಿಥಿಲಾವಸ್ಥೆಯಲ್ಲಿ ದುರಸ್ತಿಗೆ ಒತ್ತಾಯಿಸಿ  ಅಧಿಕಾರಿಗಳಿಗೆ ಮನವಿ

ಮೀಂಜ:  ಮಡಿಮೊಗರು (ಸಂತಡ್ಕ)ನಲ್ಲಿರುವ ಹಳೆಯ ಎಂಜಿಎಲ್‌ಸಿ ಕಟ್ಟಡ ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡದ ಮೇಲ್ಛಾವಣಿ, ಗೋಡೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲ್ಲು ಗಿಡಗಳು ಬೆಳೆದು ಅಪಾಯಕಾರಿ ಯಾಗಿ ಪರಿಣಮಿಸಿದೆ.  ಸಾರ್ವಜನಿ ಕರ ಉಪಯೋಗಕ್ಕೆ ಬರಬಹುದಾದ ಈ ಸರಕಾರಿ ಕಟ್ಟಡದ ಬಗ್ಗೆ  ನಿರ್ಲಕ್ಷ್ಯ ವಹಿಸದೆ ದುರಸ್ತಿ ಕಾರ್ಯ ನಡೆಸಿ  ಗ್ರಾಮ ಕಚೇರಿ ಅಥವಾ ಯುನಾನಿ ಆಸ್ಪತ್ರೆಯಾಗಿ ಬಳಸಲು ಕ್ರಮ ಕೈಗೊಳ್ಳ ಬೇಕೆಂದು  ಒತ್ತಾಯಿಸಿ ಸಮಾಜಸೇವಕ ಎಂ.ಕೆ. ಮಂಗಳಿಮಾರ್  ಜಿಲ್ಲಾಧಿಕಾರಿ, ಶಾಸಕ, ಪಂಚಾಯತ್ ಅಧ್ಯಕ್ಷರ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.  ಸಾರ್ವಜನಿಕರ ಉಪಯೋಗಕ್ಕೆ ಬರಬಹುದಾದ ಸರಕಾರಿ ಸೊತ್ತನ್ನು ಸಂರಕ್ಷಿಸಬೇಕಾಗಿ ಅವರು ಮನವಿಯಲ್ಲಿ ವಿನಂತಿಸಿದ್ದಾರೆ. 

RELATED NEWS

You cannot copy contents of this page