ವರ್ಕಾಡಿ ಪಂಚಾಯತ್ ದೂರು ಪರಿಹಾರ ಅದಾಲತ್  80ಕ್ಕೂ ಹೆಚ್ಚು ದೂರುಗಳಿಗೆ ಒಂದೇ ಸೂರಿನಡಿ ಪರಿಹಾರ

ವರ್ಕಾಡಿ: ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರ ಸಂಕಷ್ಟ, ಸಮಸ್ಯೆ ಹಾಗೂ ಅಹವಾಲುಗಳನ್ನು ಸೂಕ್ಷ್ಮವಾಗಿ ಗುರುತಿಸಿ, ಅವುಗಳಿಗೆ ತ್ವರಿತ ಹಾಗೂ ಸೂಕ್ತ ಪರಿಹಾರ ಒದಗಿಸುವುದರಲ್ಲೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಮತ್ತು ‘ರಾಮರಾಜ್ಯ’ ಪರಿಕಲ್ಪನೆಗಳ ನಿಜವಾದ ಸಾಕಾರತೆ ಅಡಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಹೇಳಿದರು. ಬಹುಕಾಲಗಳಿಂದ ವಿವಿಧ ಸಮಸ್ಯೆಗಳಿಗೆ ವಿವಿಧ ಸರಕಾರಿ ಕಚೇರಿಗಳಲ್ಲಿ ಅಲೆದಾಡುತ್ತಿರುವ ಜನರಿಗೆ, ಅವರ ಅಹವಾಲು ಗಳನ್ನು ಒಂದೇ ಸೂರಿನಡಿ ಆಲಿಸಿ ಸಂಬAಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ವರ್ಕಾಡಿ ಪಂಚಾಯತ್ ಆಯೋಜಿಸಿರುವ ದೂರು ಪರಿ ಹಾರ ಅದಾಲತ್ ಇತರ ಸ್ಥಳೀಥಿಯಾಡಳಿತ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು. ವರ್ಕಾಡಿ ಪಂಚಾಯತ್ ಆಯೋಜಿಸಿದ್ದ ದೂರು ಪರಿಹಾರ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಯತ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು.
ಈ ಅದಾಲತ್‌ನಲ್ಲಿ ೮೦ಕ್ಕೂ ಅಧಿಕ ದೂರುಗಳು ಮತ್ತು ಅಹ ವಾಲುಗಳನ್ನು ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಪಂಚಾಯತ್ ಜಂಟಿ ನಿರ್ದೇಶಕ ಹರಿದಾಸ್ ಕೆ.ವಿ., ಆಂತರಿಕ ವಿಜಿಲೆನ್ಸ್ ಅಧಿಕಾರಿ ಟಿ.ಟಿ. ಸುರೇಂದ್ರನ್, ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಜಯನ್ ಪಿ., ಅಸಿಸ್ಟೆಂಟ್ ಟೌನ್ ಪ್ಲಾನರ್ ಬೈಜು ಪಿ.ವಿ. ಉಪಸ್ಥಿತರಿದ್ದರು. ವರ್ಕಾಡಿ ಪಂಚಾಯತ್ ಉಪಾಧ್ಯಕ್ಷೆ ಫಾತಿಮತ್ ನಸೀಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ, ಪುರುಷೋ ತ್ತಮ ಅರಿಬೈಲ್, ಬ್ಲಾಕ್ ಪಂಚಾಯತ್ ಸದಸ್ಯೆ ಬೀಫಾತಿಮಾ, ಪಂ. ಸದಸ್ಯರಾದ ನಾರಾಯಣ, ಅಬೂಬಕ್ಕರ್, ಲೀನಾ ಟೆಲ್ಲಿಸ್, ಉಮೇಶ್ ಶೆಟ್ಟಿ, ಗೀತಾ ವಿ. ಸಾಮಾನಿ, ಗೋಪಾಲಕೃಷ್ಣ ಪಜ್ವ, ಚಂದ್ರಶೇಖರ್ ಜಿ, ಮಾಲತಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಭಾಗವಹಿ ಸಿದ್ದರು. ಮೆಡಿಕಲ್ ಆಫೀಸರ್ ಪ್ರಸೀದಾ, ಐಸಿಡಿಎಸ್ ಸೂಪರ್‌ವೈಸರ್ ಶೋಭಾ ಹಾಗೂ ಸಿಡಿಎಸ್ ಚೇರ್‌ಪರ್ಸನ್ ವಿಜಯಲಕ್ಷ್ಮಿ, ಹೆಲ್ತ್ ಇನ್ಸ್ಪೆಕ್ಟರ್ ಮುಹಮ್ಮದ್ ಕುಂಞ, ಅಸಿಸ್ಟೆಂಟ್ ಇಂಜಿನಿಯರ್ ಅಖಿಲಾ ಸೇರಿದಂತೆ ವಿವಿಧ ಇಲಾಖೆ ಗಳ ಪ್ರತಿನಿಧಿಗಳು ಭಾಗವಹಿಸಿದರು. ಪಂಚಾಯತ್ ಪ್ರಭಾರ ಕಾರ್ಯದರ್ಶಿ ಐತಪ್ಪ ನಾಯ್ಕ್ ಸ್ವಾಗತಿಸಿದರು. ವಿಬಿಜಿ ರಾಮ್ ಜಿ ಇಂಜಿನಿಯರ್ ಸಂದೇಶ್ ವಂದಿಸಿದರು. ಂಬ

RELATED NEWS

You cannot copy contents of this page