ಪಾಲಕ್ಕಾಡ್ ರೈಲ್ವೇ ವಿಭಾಗವನ್ನು ವಿಭಜಿಸಿದ ತೀರ್ಮಾನದ ವಿರುದ್ಧ ಕೇರಳದಿಂದ ತೀವ್ರ ಪ್ರತಿಭಟನೆ

ತಿರುವನಂತಪುರ: ಉಳ್ಳಾಲದಿಂದ ಮಂಗಳೂರು ತನಕದ ರೈಲು ನಿಲ್ದಾಣಗಳನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ವಲಯದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿದ ರೈಲ್ವೇ ಇಲಾಖೆಯ ತೀರ್ಮಾನದ ವಿರುದ್ಧ ಕೇರಳ ತೀವ್ರ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದೆ.  ಇಂತಹ ತೀರ್ಮಾನದಿಂದ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಮಾತ್ರವಲ್ಲ ಕೇರಳಕ್ಕೂ  ತೀವ್ರ ಆರ್ಥಿಕ ನಷ್ಟ ಉಂಟುಮಾಡ ಲಿದೆ. ಮಾತ್ರವಲ್ಲ ರೈಲ್ವೇ ಪ್ರಯಾಣಿಕರನ್ನೂ ಇದು ತೀವ್ರ ಆತಂಕಕ್ಕೊಳಪಡಿಸಿದೆ. ಇಂತಹ ತೀ ರ್ಮಾನವನ್ನು ಸುತರಾಂ ಅಂಗೀಕರಿಸು ವಂತಿಲ್ಲವೆಂದೂ ಕೇರಳ ಸರಕಾರ ಹಾಗೂ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ. ನೂತನ ಬದಲಾವಣೆಯನ್ನು ಅಕ್ಟೋಬರ್ ೧ರಿಂದ ಜ್ಯಾರಿಗೆ ತರಲು ರೈಲ್ವೇ ಇಲಾಖೆ ತೀರ್ಮಾನಿಸಿದೆ.

ಈ ತೀರ್ಮಾನ ಜ್ಯಾರಿಗೊಂಡಲ್ಲಿ ಮಂಗಳೂ ರಿನಿಂದ ಕೇರಳದತ್ತ ಸಂಚರಿಸುವ  ರೈಲು  ಸೇವೆಗಳ ನಿಯಂತ್ರಣ ಸಂಪೂರ್ಣವಾಗಿ ಮೈಸೂರು ವಿಭಾಗಕ್ಕೆ ಸೇರಲಿದೆ. ಮೈಸೂರು ರೈಲ್ವೇ ವಿಭಾಗ ಕೈಗೊಳ್ಳುವ ಯಾವುದೇ ತೀರ್ಮಾನಗಳು ಕೇರಳಕ್ಕೆ  ಅನುಕೂಲಕರವಾಗಬೇಕೆಂದೇನಿಲ್ಲ. ಮಂಗಳೂರಿನಿಂದ ಕೇರಳಕ್ಕೆ ಸಂಚಾರ ನಡೆಸುವ ರೈಲುಗಳ  ಎಮರ್ಜೆನ್ಸಿ ಟಿಕೆಟ್ ಕ್ವಾಟಕ್ಕಾಗಿ ಕೇರಳದ ರೈಲ್ವೇ ಪ್ರಯಾಣಿಕರು ಇನ್ನು  ಮೈಸೂರು ವಿಭಾಗವನ್ನು ಆಶ್ರಯಿಸಬೇಕಾಗಿ ಬರಲಿದೆ. ಹೀಗೆ ನಡೆದಲ್ಲಿ ಪಾಲಕ್ಕಾಡ್ ರೈಲ್ವೇ ವಿಭಾಗದ ಆದಾಯದಲ್ಲಿ 37 ಕೋಟಿ ರೂ.ಗಳ ನಷ್ಟವುಂಟಾಗಲಿದೆ. ಆದ್ದರಿಂದ ಇಂತಹ ತೀರ್ಮಾನದಿಂದ ರೈಲ್ವೇ ಇಲಾಖೆ ತಕ್ಷಣ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕೇಂದ್ರ ರೈಲ್ವೇ ಸಚಿವರು ಮತ್ತು ರೈಲ್ವೇ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತುರ್ತಾಗಿ ಪತ್ರ ಬರೆದಿದ್ದಾರೆ. ಇದು ಕೇರಳಕ್ಕೆ ಕತ್ತಲಲ್ಲಿ ಲಭಿಸಿದ ಮಾರಕ ಪ್ರಹಾರವಾಗಿದೆ. ಪಾಲ್ಘಾಟ್ ರೈಲ್ವೇ ವಿಭಾಗವನ್ನು ಇಲ್ಲದಾಗಿಸುವ ಪ್ರಯತ್ನ ಇದಾಗಿದೆಯೆಂದೂ ಮಾತ್ರವಲ್ಲ ರೈಲ್ವೇ ಮತ್ತು ಕೇರಳದ ಆರ್ಥಿಕತೆಗೂ ಇದು ಭಾರೀ ಹೊಡೆತ ನೀಡಲಿದೆ. ಆದ್ದರಿಂದ ಇಂತಹ ತೀರ್ಮಾನದಿಂದ ರೈಲ್ವೇ ಇಲಾಖೆ ತಕ್ಷಣ ಹಿಂದಕ್ಕೆ ಸರಿಯಬೇ ಕೆಂದು ಕೇರಳ ಸರಕಾರ  ಆಗ್ರಹಪಟ್ಟಿದೆ.

RELATED NEWS

You cannot copy contents of this page