ಪಾರ್ಟ್‌ಟೈಮ್ ಉದ್ಯೋಗದ ಭರವಸೆ ನೀಡಿ ಯುವಕನಿಂದ 24.07 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಪಾರ್ಟ್‌ಟೈಮ್ ಕೆಲಸ ನೀಡುವ ಭರವಸೆಯೊಡ್ಡಿ ಯುವಕನಿಂದ 24.07 ಲಕ್ಷ ರೂ.  ಎಗರಿಸಿದ ದೂರಿನಂತೆ ಓರ್ವನ ವಿರುದ್ಧ ಕಾಸರಗೋಡು ಸೈಬರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಡೂರು ಪಾಂಡಿ ಕೊಟ್ಟುಂಬಯಲ್ ನಿವಾಸಿಯಾದ ಯುವಕ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆರೋಪಿ ನನ್ನನ್ನು ಸಂಪರ್ಕಿಸಿ ಪಾರ್ಟ್‌ಟೈಮ್ ಉದ್ಯೋಗ ನೀಡುವುದಾಗಿ ಮತ್ತು ಅದರಿಂದ ಭಾರೀ ಕಮಿಷನ್ ಲಭಿಸಲಿದೆ ಎಂಬ ಭರವಸೆ ನೀಡಿ  2025 ಆಗಸ್ಟ್ 21ರಿಂದ 2025 ಡಿಸೆಂಬರ್ 30ರ ತನಕದ ಅವಧಿಯಲ್ಲಿ ನನ್ನ ಬ್ಯಾಂಕ್ ಖಾತೆಗಳಿಂದಾಗಿ ಒಟ್ಟು 24,72,813 ರೂ. ಲಪಟಾಯಿಸಿ ದ್ದನೆಂದೂ, ಅದರಲ್ಲಿ 65000 ರೂ.ವನ್ನು ಮಾತ್ರವೇ ಹಿಂತಿರುಗಿಸಿ ದ್ದನೆಂದು ಸೈಬರ್ ಪೊಲೀಸರು ನೀಡಿದ ದೂರಿನಲ್ಲಿ ದೂರುದಾರ ನಾದ ಯುವಕ ತಿಳಿಸಿದ್ದಾನೆ.

RELATED NEWS

You cannot copy contents of this page