ಕಾಸರಗೋಡು: ೨೯ ಲೇಬರ್ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ಸಂಕ್ಷಿಪ್ತಗೊಳಿಸುವಾಗ ಅದರಲ್ಲಿ ಕಾರ್ಮಿಕರಿಗೆ ಪ್ರತಿಕೂಲವಾಗಿ ಬಾಧಿಸುವ ಕೋಡ್‌ಗಳನ್ನು ಪುನರ್ ಪರಿಶೀಲಿಸಬೇಕೆಂದು ಬಿಎಂಎಸ್ ಕಾಸರಗೋಡು ವಲಯ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು. ವಲಯ ಉಪಾಧ್ಯಕ್ಷ ಜನಾರ್ದನ ಕಡಪ್ಪುರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರದೀಪ್ ಕೇಳೋತ್ ಶುಭ ಕೋರಿದರು. ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಚಟುವಟಿಕಾ ವರದಿ, ವಲಯ ಕೋಶಾಧಿಕಾರಿ ಪುಷ್ಪರಾಜ್ ಆಯ ವ್ಯಯಲೆಕ್ಕ ಮಂಡಿಸಿದರು. ವಲಯ ಪ್ರಬಾರ ಗುರುದಾಸ್ ನಿಯಂತ್ರಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಗಿರೀಶ್ ಕುಮಾರ್, ಉಪಾಧ್ಯಕ್ಷರಾಗಿ ಜನಾರ್ದನ ಕಡಪ್ಪುರ, ವೀಣಾ ನೆಲ್ಲಿಕುಂಜೆ, ಅರುಣ್ ಬಿ, ಎಂಎಸ್‌ಆರ್‌ಎ ಬಾಲಕೃಷ್ಣನ್ ನೆಲ್ಲಿಕುಂಜೆ, ಕಾರ್ಯದರ್ಶಿಯಾಗಿ ಬಾಬುಮೋನ್ ಚೆಂಗಳ, ಜೊತೆ ಕಾರ್ಯದರ್ಶಿಗಳಾಗಿ ರಂಜಿತ್ ಚೆಂಗಳ, ಶಾಂತಕುಮಾರಿ ಜೆಪಿ ನಗರ, ಕೋಶಾ ಧಿಕಾರಿಯಾಗಿ ಎಸ್. ಪುಷ್ಪರಾಜ್ ಕೊರಕ್ಕೋಡು ಎಂಬಿವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್ ಸಮಾರೋಪ ಭಾಷಣ ಮಾಡಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಭಾಸ್ಕರನ್ ಪೊಯಿನಾಚಿ, ನಗರಸಭಾ ಸಮಿತಿ ಅಧ್ಯಕ್ಷ ಎ. ಕೇಶವ, ಮಧೂರು ವಲಯ ಕಾರ್ಯದರ್ಶಿ ಶ್ರೀಧರ ಚೆನಕ್ಕೋಡು, ಅಧ್ಯಕ್ಷ ವಸಂತ ನಾಯ್ಕ್, ಚೆಂಗಳ ಪಂಚಾಯತ್ ಕಾರ್ಯದರ್ಶಿ ಅವಿನಾಶ್ ನೆಕ್ರಾಜೆ, ಪಂಚಾಯತ್ ಸಮಿತಿ ಅಧ್ಯಕ್ಷ ಪ್ರಜಿತ್ ಪುಂಡೂರು ಭಾಗವಹಿಸಿದರು. ಜಯಶೀಲನ್ (ಕೆಎಸ್‌ಟಿ ಎಂಪ್ಲೋಯೀಸ್ ಸಂಘ್) ವಂದೇ ಮಾತರಂ, ಬಾಬುಮೋನ್ ಚೆಂಗಳ ಮಜ್ದೂರ್ ಗೀತೆ ಆಲಾಪಿಸಿದರು. ಮನೋಜ್ ಜೆಪಿ ನಗರ ಸ್ವಾಗತಿಸಿ, ರಂಜಿತ್ ಚೆರ್ಕಳ ವಂದಿಸಿದರು.







