ಜಿಲ್ಲೆಗೆ ಕೇಂದ್ರ ಸರಕಾರದ ಓಣಂ ಹಬ್ಬದ ಕೊಡುಗೆ: ಕೋಟಿಕುಳಂ ರೈಲ್ವೇ ಮೇಲ್ಸೇತುವೆ ಸಾಕಾರದತ್ತ

ಕಾಸರಗೋಡು: ಕೋಟಿಕುಳಂ ರೈಲ್ವೇ ಮೇಲ್ಸೇತುವೆಯ ಡಿಪಿಆರ್‌ಗೆ ಅಂಗೀಕಾರ ಲಭಿಸಿದೆ. ನಿರ್ಮಾಣ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬಹುದಾಗಿದೆ. ಜಿಲ್ಲೆಗೆ ಕೇಂದ್ರ ಸರಕಾರದ ಓಣಂ ಹಬ್ಬದ ಕೊಡುಗೆಯಾಗಿದೆ ಇದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರದೇಶದ ಹಲವು ಕಾಲದ ಬೇಡಿಕೆ ಕೂಗಿಗೆ ಪರಿಹಾರವಾ ಗಲಿದೆ. ಜನರ ಈ ಆಗ್ರಹಕ್ಕೆ ಬೇಕಾಗಿ ಮಧ್ಯೆ ಪ್ರವೇಶಿಸಲು ಸಾಧ್ಯವಾಗಿರುವುದ ರಲ್ಲಿ ಅತಿಯಾದ ಅಭಿಮಾನವಿದೆ ಎಂದು ಅಶ್ವಿನಿ ನುಡಿದರು. ಇದಕ್ಕೆ ಬೇಕಾಗಿ ಸಹಾಯ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಎಂಬಿವರನ್ನು ಅಶ್ವಿನಿ ಅಭಿನಂದಿಸಿದರು.

RELATED NEWS

You cannot copy contents of this page