ಕೊಯಿಪಾಡಿ ಕಡಲ ತೀರದಲ್ಲಿ ಸಮುದ್ರಪೂಜೆ

ಕುಂಬಳೆ: ಇಲ್ಲಿನ ಶ್ರೀ ವೀರವಿಠಲ ದೇವಸ್ಥಾನದ ವತಿಯಿಂದ ನಿಜಶ್ರಾವಣ ಮಾಸದ ಚತುರ್ದಶಿ ದಿನವಾದ ನಿನ್ನೆ ಕುಂಬಳೆ ಕೊಯಿಪಾಡಿ ಕಡಪ್ಪುರ ಕಡಲ ತೀರದಲ್ಲಿ ಸಮುದ್ರ ಪೂಜೆ ನಡೆಸಲಾ ಯಿತು. ಪ್ರಧಾನ ಅರ್ಚಕ ವೇದಮೂರ್ತಿ ಕೆ. ಪುಂಡಲೀಕ ಭಟ್ ನೇತೃತ್ವದಲ್ಲಿ ಶ್ರೀ ವಿಷ್ಣು ದೇವರ ಪ್ರೀತಿಗಾಗಿ ಹಾಗೂ ನಾಡಿನ ನಾಗರಿಕರಿಗೆ ಮಂಗಲ, ಆರೋಗ್ಯ ಲಭಿಸಲಿ ಎಂದು ಪ್ರಾರ್ಥಿಸಿ ಸಮುದ್ರರಾಜನಿಗೆ ಹಾಲು, ಅರಶಿಣಕುಂಕುಮ, ತೆಂಗಿನಕಾಯಿ, ನಾಣ್ಯ, ಸೀಯಾಳ ಸಹಿತ ಸುವಸ್ತುಗಳನ್ನು ಸಮರ್ಪಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಕೆ. ನಾರಾಯಣ ಪ್ರಭು, ಆಡಳಿತ ಮಂಡಳಿ ಸದಸ್ಯರು, ಸ್ಥಳೀಯರು, ಮೀನುಗಾರರು ಉಪಸ್ಥಿತರಿದ್ದರು.

You cannot copy contents of this page