ಕಾಸರಗೋಡು ಎಲ್‌ಐಸಿ ಶಾಖೆಯಿಂದ  ಸಂಭ್ರಮದ ಓಣಂ ಆಚರಣೆ

ಕಾಸರಗೋಡು: ಕಾಸರಗೋಡು ಎಲ್ಐಸಿ ಶಾಖೆಯಲ್ಲಿ ಓಣಂ ಹಬ್ಬದಂಗವಾಗಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೇರಳ, ತಮಿಳುನಾಡು, ಪುದುಚ್ಚೇರಿ ಎಂಬಿವು ಒಳಗೊಂಡ ಎಲ್ಐಸಿ ದಕ್ಷಿಣ ವಲಯದ ಅಧಿಕಾರಿಗಳು, ನೌಕರರು, ಏಜೆಂಟರು ಭಾಗವಹಿಸಿದರು. ದಕ್ಷಿಣ ವಲಯ ಮೆನೇಜರ್ ಮುರಳೀಧರ ಮುಖ್ಯ ಅತಿಥಿಯಾಗಿದ್ದರು. ಆರ್.ಎಂ.(ಮಾರ್ಕೆಟಿಂಗ್) ಬಿಜುಮೋನ್, ಕಲ್ಲಿಕೋಟೆ ಡಿವಿಶನ್ ಮಾರ್ಕೆಟಿಂಗ್ ಮೆನೇಜರ್ ಜಯನ್, ಮೆನೇಜರ್ ಗೋವಿಂದ್ ಶುಭ ಕೋರಿದರು. ಕಾಸರಗೋಡು ಸೀನಿಯರ್ ಬ್ರಾಂಚ್ ಮೆನೇಜರ್ ಎಂ.ಪಿ. ಶ್ರೀಜಿತ್, ಎಡಿಎಂ ಪ್ರೀತಾ ಪ್ರೇಮನ್ ಮಾತನಾಡಿದರು. ಶೋಭಾ ಯಾತ್ರೆ, ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು, ಮನರಂಜನಾ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

				

You cannot copy contents of this page