ಕಾಸರಗೋಡು: ನಿಲ್ಲಿಸಿದ್ದ ಲಾರಿ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ನೀಲೇಶ್ವರ ಚಿರಪುರಂ ಆಲಿನ್ ಕೀಳಿಲ್‌ನಲ್ಲಿ ನಿಲ್ಲಿಸಿದ್ದ ಚಿರಪುರಂ ಮಣ್ಣಾರತ್ ಹೌಸ್‌ನ ಜೋಷಿ ಥೋಮಸ್ ಎಂಬವರ ಲಾರಿ ನಿನ್ನೆ ಮುಂಜಾನೆ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಲಾರಿಯ ಕ್ಯಾಬಿನ್, ಇಂಜಿನ್ ಸೇರಿದಂತೆ ಹೆಚ್ಚಿನ ಭಾಗಗಳು ಪೂರ್ಣವಾಗಿ ಸುಟ್ಟುಹೋಗಿದೆ. ಆ ಲಾರಿಯ ಸಮೀಪ ಇತರ ಲಾರಿಗಳನ್ನು ನಿಲ್ಲಿಸಲಾಗಿತ್ತಾದರೂ ಅವುಗಳಿಗೆ ಯಾವುದೇ ರೀತಿಯ ಹಾನಿಯಾ ಗಿಲ್ಲ. ವಿಷಯ ತಿಳಿದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಲಾರಿ ಬೆಂಕಿಗಾಹುತಿಯಾದ ಬಗ್ಗೆ ಮಾಲಕ ನೀಡಿದ ದೂರಿನಂತೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬೆಂಕಿ ಅನಾಹುತದಿಂದ ನಾಲ್ಕು ಲಕ್ಷಕ್ಕೂ ಅಧಿಕನಷ್ಟ ಉಂಟಾಗಿದೆ ಯೆಂದು ಲಾರಿ ಮಾಲಕ ತಿಳಿಸಿದ್ದಾರೆ.






