ಕಾರು- ಬೈಕ್ ಢಿಕ್ಕಿ: ಸವಾರ ಗಂಭೀರ ಗಾಯ

ಮಂಜೇಶ್ವರ: ವೈದ್ಯರು ಚಲಾಯಿಸುತ್ತಿದ್ದ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತೂಮಿನಾಡು ಸರ್ವೀಸ್ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ತಲ ಪಾಡಿ ಭಾಗದಿಂದ ಡಾ. ಜಯಪಾಲ್ ಶೆಟ್ಟಿ ಚಲಾಯಿಸುತ್ತಿದ್ದ ಕಾರು ಹಾಗೂ ಕುಂಜತ್ತೂರು ಭಾಗದಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಇದರಿಂದ ಬೈಕ್ ಸವಾರ ಕುಂಜತ್ತೂರು ನಿವಾಸಿ ನಿಯಾಸ್ ಗಂಭೀರ ಗಾಯ ಗೊಂಡಿದ್ದು, ಅವರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಅಪಘಾತದಲ್ಲಿ ಕಾರು ಮತ್ತು ಬೈಕಿನ ಮುಂಭಾಗ ಹಾನಿಯಾಗಿದೆ. ಸ್ಥಳಕ್ಕೆ ಹೈವೇ ಪೊಲೀಸರು ತಲುಪಿ ವಾಹನವನ್ನು ಮಂಜೇಶ್ವರ ಠಾಣೆಗೆ ಸಾಗಿಸಲಾಗಿದೆ.

RELATED NEWS

You cannot copy contents of this page