ಕುಂಬಳೆ: ಇತ್ತೀಚೆಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಎಎಸ್ಪಿ, ಆರ್ಟಿಒ, ಪಂಚಾಯತ್ ಜನಪ್ರತಿ ನಿಧಿಗಳು, ಬಸ್ ಕಾರ್ಮಿಕರು, ಸಂಘಟನೆಗಳ ನೇತಾರರು ಸೇರಿ ಕೈಗೊಂಡ ಟ್ರಾಫಿಕ್ ಪರಿಷ್ಕಾರವನ್ನು ಇದೀಗ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ ಉಲ್ಲಂಘಿಸಿದೆಯೆಂದು ಬಸ್ ನೌಕರರು ಆರೋಪಿಸುತ್ತಿದ್ದಾರೆ. ಬದಿಯಡ್ಕ, ಪೆರ್ಲ ಸಹಿತ ಸೀತಾಂಗೋಳಿ ಭಾಗದಿಂದ ಕುಂಬಳೆಗೆ ತಲುಪುವ ಖಾಸಗಿ ಬಸ್ಗಳನ್ನು ಪ್ರಸ್ತುತ ಸ್ಥಳದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದರ ಬದಲು ಬಸ್ಗಳನ್ನು ಕುಂಬಳೆಯ ಹಳೆ ಬಸ್ ನಿಲ್ದಾಣಕ್ಕೆ ಕೊಂಡೊಯ್ದು ಪ್ರಯಾಣಿಕರನ್ನು ಇಳಿಸುವಂತೆ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ ಸಿಐಗೆ ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಇದರಂತೆ ಬದಿಯಡ್ಕ, ಪೆರ್ಲ ಸಹಿತ ಸೀತಾಂಗೋಳಿ ಭಾಗದಿಂದ ಬರುವ ಬಸ್ಗಳನ್ನು ಕುಂಬಳೆಯ ಹಳೆ ಬಸ್ ನಿಲ್ದಾಣಕ್ಕೆ ತಲುಪಿಸಿ ಪ್ರಯಾಣಿಕರನ್ನು ಇಳಿಸುವಂತೆ ಪೊಲೀಸರು ಬಸ್ ಚಾಲಕರಿಗೆ ಸೂಚಿಸುತ್ತಿದ್ದಾರೆ. ಬಸ್ಗಳನ್ನು ಹಳೆ ಬಸ್ ನಿಲ್ದಾಣಕ್ಕೆ ಕೊಂಡೊಯ್ದು ಪ್ರಯಾಣಿಕರನ್ನು ಇಳಿಸಿದರೆ ಮಂಗಳೂರು ಹಾಗೂ ಕಾಸರಗೋಡು ಭಾಗಕ್ಕೆ ತೆರಳಬೇಕಾದ ಪ್ರಯಾಣಿಕರು ಮತ್ತೆ ನಡೆದುಕೊಂಡು ಕಾಸರಗೋಡು, ಮಂಗಳೂರು ಭಾಗಕ್ಕೆ ತೆರಳುವ ಬಸ್ಗಳು ನಿಲ್ಲುವ ಸ್ಥಳಕ್ಕೆ ಬರಬೇಕಾದ ಸ್ಥಿತಿ ಉಂಟಾಗಿದೆ. ಅಲ್ಲದೆ ಬಸ್ಗಳ ಸಂಚಾರಕ್ಕೆ ಸಮಯದ ಅಭಾವವುಂಟಾಗ ಲಿದೆಯೆಂ ದು ಹೇಳಲಾಗುತ್ತಿದೆ. ಪೊಲೀಸ್ ಠಾಣೆ ಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಬಸ್ಗಳನ್ನು ಆರನೇ ನಂಬ್ರ ವೈಟಿಂಗ್ ಶೆಡ್ ಸಮೀಪದಲ್ಲೇ ನಿಲ್ಲಿಸುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಅದನ್ನು ಉಲ್ಲಂಘಿ ಸಲಾಗಿದೆಯೆಂದು ಬಸ್ ನೌಕರರು ಆರೋಪಿ ಸುತ್ತಿದ್ದಾರೆ. ಇದೇ ರೀತಿಯ ಒತ್ತಡ ಮುಂದುವರಿ ದಲ್ಲಿ ಅದರ ವಿರುದ್ಧ ಮುಷ್ಕರ ನಡೆಸಬೇಕಾ ದೀತೆಂದು ಬಸ್ ನೌಕರರು ತಿಳಿಸುತ್ತಿದ್ದಾರೆ.






