ಮಂಜೇಶ್ವರ: ಶೋಚನೀಯ ಸ್ಥಿತಿಯಲ್ಲಿದ್ದ ಕೆಜೆಎಂ ರಸ್ತೆಯ ಪುನರುದ್ಧಾರ ಕಾಮಗಾರಿಗೆ ಶಾಸಕರ ನಿಧಿಯಿಂದ 97 ಲಕ್ಷ ರೂ. ಮಂಜೂರು ಮಾಡಲಾಗಿದೆ. ಸ್ಥಳೀಯರ ಬಹುಕಾಲದ ಬೇಡಿಕೆಗೆ ಪರಿಹಾರ ಉಂಟಾಗಿದೆ. ರಸ್ತೆಯ ಕಾಮಗಾರಿ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು. ಈ ವೇಳೆ ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಸೈಫುಲ್ಲ ತಂಙಳ್, ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ, ಉಪಾಧ್ಯಕ್ಷೆ ಫಾತಿಮತ್ ಸುಹ್ರ, ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಅಣ್ಣಿ, ಸದಸ್ಯ ಮುಕ್ತಾರ್, ಇಲ್ಯಾಸ್ ತೂಮಿನಾಡು, ಹಾಮಿದ್ ತಂಙಳ್, ಹಮೀದ್ ಮಚ್ಚಂಪಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







