ಯುವಕನನ್ನು ಅಪಹರಿಸಿ ಬೆದರಿಕೆಯೊಡ್ಡಿ 1.02 ಲಕ್ಷ ರೂ. ದರೋಡೆ: ಆರೋಪಿಗಳಿಗಾಗಿ ಶೋಧ

ಬದಿಯಡ್ಕ: ಯುವಕನನ್ನು ಕಾರಿನಲ್ಲಿ ಅಪಹರಿಸಿ ಚೆರ್ಕಳ ಬಳಿಯ ಕ್ವಾರ್ಟರ್ಸ್‌ಗೆ ತಲುಪಿಸಿ ನಗ್ನಗೊಳಿಸಿ ಬಾಲಕಿಯೊಂದಿಗೆ ನಿಲ್ಲಿಸಿ  ವೀಡಿಯೋ ಚಿತ್ರೀಕರಿಸಿ ಬೆದರಿಕೆ ಯೊಡ್ಡಿ 1,02,000 ರೂಪಾಯಿ ಲಪಟಾಯಿಸಿದ ಪ್ರಕರಣದ ಆರೋಪಿಗಳ ಕುರಿತು ಸೂಚನೆ ಲಭಿಸಿವುದಾಗಿಯೂ ಅವರ ಪತ್ತೆಗಾಗಿ ಶೋಧ ತೀವ್ರಗೊಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದ.ಕ. ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿಯಾದ ಎ.ಎಸ್.ಸುಜಿತ್ ನೀಡಿದ ದೂರಿನಂತೆ ೫ ಮಂದಿ ತಂಡದ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಇದೇ ವೇಳೆ ಘಟನೆ ನಡೆದಿರುವುದು  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದು ದರಿಂದ ಪ್ರಕರಣದ ತನಿಖೆಯನ್ನು ವಿದ್ಯಾನಗರ ಠಾಣೆಗೆ ಹಸ್ತಾಂತರಿಸಿರು ವುದಾಗಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.

ಅಗೋಸ್ತ್ 29ರಂದು ಸಂಜೆ 6 ಗಂಟೆಗೆ ಪೆರ್ಲ ಬಳಿಯ ಉಕ್ಕಿನಡ್ಕ ದಿಂದ ಸುಜಿತ್‌ರನ್ನು 5 ಮಂದಿ ತಂಡ ಬೆದರಿಕೆಯೊಡ್ಡಿ ಕಾರನ್ನು ಅಪಹರಿಸಿ ಚೆರ್ಕಳ ಬಳಿಯ ಕ್ವಾರ್ಟರ್ಸ್‌ಗೆ ತಲಪಿಸಿ ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವೀಡಿಯೋ ಚಿತ್ರೀಕರಿಸಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ ಹಣ ದರೋಡೆ ನಡೆಸಿತ್ತೆನ್ನಲಾಗಿದೆ.

RELATED NEWS

You cannot copy contents of this page