ಉಪ್ಪಳ: ಬೇಪೂರು ಸುಭಾಶ್ ನಗರದಲ್ಲಿನ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಮಂದಿರದ ಕಟ್ಟಡಕ್ಕೆ ಮೇಲ್ಛಾವಣಿ ನಿರ್ಮಾಣಕ್ಕೆ ತಡೆಯೊಡ್ಡು ತ್ತಿರುವುದಾಗಿ ದೂರಿ ಎಸ್.ಎಂ.ಎಸ್. ಘಟಕ ಡಿವೈಎಸ್ಪಿಗೆ ಮಂದಿರದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ಕಾರ್ಯಾಚರಿ ಸುತ್ತಿರುವ ಈ ಮಂದಿರ ಜಿಲ್ಲಾ ರಿಜಿಸ್ಟ್ರರ್ ಕಚೇರಿಯಲ್ಲಿ ನೋಂದಾಯಿಸಿದ್ದು, ಮಂಗಲ್ಪಾಡಿ ಪಂಚಾಯತ್ನ ಟ್ಯಾಕ್ಸ್ ಅಸಸ್ಮೆಂಟ್ ಲಿಸ್ಟ್ನಲ್ಲಿ ಒಳಗೊಂ ಡಿದೆ. ಕುಬಣೂರು ವಿಲ್ಲೇಜ್ನ ರಿ ಸರ್ವೇ ನಂಬ್ರ ೫೬/೧ ಎ ಎಂಬ ಸ್ಥಳದಲ್ಲಿರುವ ಮಂಗಲ್ಪಾಡಿ ಪಂಚಾಯತ್ನ ೧೮೭/ಎ ಎಂಬ ನಂಬ್ರ ಒಳಗೊಂಡ ಈ ಮಂದಿರಕ್ಕೆ ತೆರಿಗೆ ಹೊರತುಪಡಿಸಲಾಗಿದೆ. ಈ ಮಂದಿರದಲ್ಲಿ ಹಲವು ವರ್ಷಗಳಿಂದ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ಕಳೆದ ಜನವರಿಯಲ್ಲಿ ಮಂದಿರದ ಛಾವಣಿ ಹಾನಿಗೊಂಡಿದ್ದು, ಇದನ್ನು ನವೀಕರಿಸಲು ಈಗ ತೀರ್ಮಾನಿಸಲಾಗಿದೆ. ಆದರೆ ಕಾಮಗಾರಿ ಆರಂಭಿಸುವ ಮಧ್ಯೆ ಈ ಮೊದಲಿಲ್ಲದ ಅಡೆತಡೆಗಳನ್ನು ಅಧಿಕಾರಿ ವರ್ಗ ಸೃಷ್ಟಿಸುತ್ತಿದೆಯೆಂದು ಮಂದಿರದ ಪದಾಧಿಕಾರಿಗಳು ದೂರಿದ್ದಾರೆ. ಮಂಗಲ್ಪಾಡಿ ಪಂಚಾಯತ್ನ, ಕುಂಬಳೆ ಪೊಲೀಸ್ ಠಾಣೆಯ, ಪಿಡಬ್ಲ್ಯುಡಿ ಕಚೇರಿಯ ಕೆಲವು ಅಧಿಕಾರಿಗಳು ಲಿಖಿತವಾಗಿ ಯಾವುದೇ ಸೂಚನೆಯನ್ನು ನೀಡದೆ ನಿರ್ಮಾಣ ಕಾಮಗಾರಿಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಮಾತ್ರವಲ್ಲ ಪದಾಧಿಕಾರಿಗಳು ಪರಿಶಿಷ್ಟ ಜಾತಿಗೆ ಸೇರಿದವರಾದ ಕಾರಣ ಜಾತಿ ಅಕ್ಷೇಪವನ್ನು ನಡೆಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ವಿಷಯಗಳನ್ನು ತಿಳಿಸಲಾಗಿದ್ದು, ಆದರೂ ನಿರ್ಮಾಣ ಚಟುವಟಿಕೆಗೆ ಅನುಮತಿ ನೀಡದೆ ಸ್ಥಳದಲ್ಲಿ ಯಾವುದೋ ಘರ್ಷಣೆ ನಡೆಯುತ್ತಿದೆ ಎಂಬ ಭಾವನೆ ಉಂಟಾಗುವ ರೀತಿಯಲ್ಲಿ ಪೊಲೀಸ್ ವಾಹನವನ್ನು ಇಲ್ಲಿ ನಿಲುಗಡೆಗೊಳಿಸಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಮುಗಿಸಲು ಪ್ರಯತ್ನಿಸಿದಾಗ ಮಂಜೇಶ್ವರ ಪಿಡಬ್ಲ್ಯುಡಿ (ರಸ್ತೆ) ವಿಭಾಗ ಇಂಜಿನಿರ್ ಶೋಭಾ ಎಂಬವರು ನಿರ್ಮಾಣ ಕಾಮಗಾರಿಯನ್ನು ನಿಲುಗಡೆಗೊಳಿಸಲು ಸೂಚಿಸಿದ್ದು, ಪೊಲೀಸರನ್ನು ಸ್ಥಳಕ್ಕೆ ಕರೆಸಿ ಬೆದರಿಸಿರುವುದಾಗಿಯೂ ಮನವಿಯಲ್ಲಿ ತಿಳಿಸಲಾಗಿದೆ. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಕೂಡ ಜಾತಿಯ ಹೆಸರಲ್ಲಿ ನಿಂದಿಸಿರುವುದಾಗಿಯೂ ಮನವಿಯಲ್ಲಿ ದೂರಲಾಗಿದೆ.
ಮಂದಿರಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಬೇಕೂರಿನ ಪಜೀರ್ ಹೌಸ್ ನಿವಾಸಿ ಕುಟ್ಟಿ ಎಂಬವರ ಪುತ್ರ ಸಂತೋಷ್, ಬೇಕೂರು ಶಿವಧಾಮ ಕಾಂಪ್ಲೆಕ್ಸ್ನಲ್ಲಿ ವಾಸಿಸುವ ಚೋಮ ಎಂಬವರ ಪುತ್ರ ಚಂದ್ರ ಮೇಲ್ನೋಟ ವಹಿಸುತ್ತಿದ್ದು, ಇವರನ್ನು ಅಸಭ್ಯ ರೀತಿಯಲ್ಲಿ ಬೆದರಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತುರ್ತು ಪರಿಗಣಿಸಿ ಮಂದಿರದಲ್ಲಿ ನಡೆ ಯಬೇಕಾದ ಧಾರ್ಮಿಕ ಕಾರ್ಯ ಕ್ರಮಗಳು, ನಿರ್ಮಾಣ ಚಟುವಟಿಕೆ ಯನ್ನು ನಡೆಸುವುದಕ್ಕಿರುವ ಕ್ರಮಗಳನ್ನು ಶೀಘ್ರವೇ ಪುನರಾರಂಭಿಸುವಂತೆ ವ್ಯವಸ್ಥೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅಲ್ಲದೆ ಸರಕಾರದ ಆದೇಶದಂತೆ ಪರಿಶಿಷ್ಟ ಜಾತಿಯವರಿಗೆ ನೀಡಬೇಕಾದ ಪ್ರತ್ಯೇಕ ಪರಿಗಣನೆ ಯನ್ನು ಅವಗಣಿಸಲಾಗಿದೆಯೆಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಪ್ರತಿಯನ್ನು ಮುಖ್ಯಮಂತ್ರಿ, ಪರಿಶಿಷ್ಟ ಜಾತಿ ಕಮಿಶನರ್, ಕುಂಬಳೆ ಪೊಲೀಸ್ ಠಾಣೆ ಸ್ಟೇಶನ್ ಆಫೀಸರ್ಗೆ ನೀಡಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.




