ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಸೌರ ವಿದ್ಯುತ್ ಸ್ಥಾಪಿಸಿ ಕ್ಷೇತ್ರ ಸ್ವಾವಲಂಬನೆ ಹೊಂದಿದೆ. 50 ಕಿಲೋ ವ್ಯಾಟ್ ಸೌರಶಕ್ತಿ ಪ್ಲಾಂಟ್‌ನ್ನು ಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ. ಮೂರು ತಿಂಗಳ ಹಿಂದೆ ವರೆಗೆ ಪ್ರತೀ ತಿಂಗಳು 4೦,೦೦೦ ರೂ. ನಿಂದ 5೦,೦೦೦ ರೂ.ವರೆಗೆ ವಿದ್ಯುತ್ ವೆಚ್ಚದಲ್ಲಿ ಪಾವತಿಸಲಾಗುತ್ತಿತ್ತು. ಅದೀಗ ಪ್ರತೀ ತಿಂಗಳು ಮೀಟರ್ ಬಾಡಿಗೆ ರೂಪದಲ್ಲಿ 7೦ ರೂ. ಹಾಗೂ ಜಿಎಸ್‌ಟಿ ಸಹಿತದ ವಿದ್ಯುತ್ ಬೋರ್ಡ್‌ನ ಫಿಕ್ಸೆಡ್ ದರವಾಗಿ 5,೦೦೦ ರೂ. ಆಗಿ ಕಡಿತಗೊಂಡಿದೆ. ಈ ಮೊದಲು ತ್ರೀಫೇಸ್ ಲೈನ್ ಸಂಪರ್ಕ ತೆಗೆದ ಹಿನ್ನೆಲೆಯಲ್ಲಿ ಫಿಕ್ಸೆಡ್ ಚಾರ್ಜ್ ಆಗಿ ಕೆಎಸ್‌ಇಬಿಗೆ ಪ್ರತೀ ತಿಂಗಳು 5೦೦೦ ರೂ. ನೀಡಲಾಗುತ್ತಿದೆ. 28 ಲಕ್ಷ ರೂ. ವೆಚ್ಚದಲ್ಲಿ ಕ್ಷೇತ್ರದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದೆ. ಪ್ಲಾಂಟ್‌ನ ಮೂಲಕ ಪ್ರತೀ ತಿಂಗಳು 47.31 ಯೂನಿಟ್ ವರೆಗೆ ಸೌರ ವಿದ್ಯುತ್ ಲಭಿಸುತ್ತಿದೆ. ಗ್ರಿಡ್ ಮೂಲಕ 3೦೦ ಯೂನಿಟ್‌ನಷ್ಟು ಸೌರ ವಿದ್ಯುತ್ತನ್ನು ಕೆಎಸ್‌ಇಬಿಗೆ ನೀಡಲಾಗು ತ್ತಿದೆ. ಅಗತ್ಯಕ್ಕೆ ವಿದ್ಯುತ್ ನೀಡಲು ಸಾಧ್ಯವಾಗದೆ ಕತ್ತಲೆಯಲ್ಲಿ ಕೆಎಸ್‌ಇಬಿ ಪರದಾಡುತ್ತಿರುವಾಗ ಕ್ಷೇತ್ರದ ಅಧಿಕಾರಿ ಗಳು ಸೌರಶಕ್ತಿಯಿಂದ ಸ್ವಾವಲಂಬನೆ ಹೊಂದಿದ ಸಂತೋಷದಲ್ಲಿದ್ದಾರೆ.
ಯಾವುದಾದರೂ ಸನ್ನಿವೇಷದಲ್ಲಿ ಸೌರಶಕ್ತಿ ವಿದ್ಯುತ್ ಮೊಟಕಾದರೆ ಆ ವೇಳೆ ಕೆಎಸ್‌ಇಬಿಯನ್ನು ಆಶ್ರಯಿಸಬೇಕಾಗಿ ಬರಬಹುದಾಗಿದೆ. ಸೌರಶಕ್ತಿ ಪ್ಲಾಂಟ್‌ನಿಂದ ಲಭಿಸುವ ವಿದ್ಯುತ್ ಉಪಯೋಗಿಸಿ, ಬೋ ರ್ಡ್‌ನ ವಿದ್ಯುತ್ತನ್ನು ಹೊರತು ಪಡಿಸಿದಾಗ ದೊಡ್ಡ ಮಟ್ಟಿನ ಆರ್ಥಿಕ ಲಾಭ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಬಾರ್ ದೇವಸ್ವಂ ಬೋರ್ಡ್‌ನ ಅಡಿಯಲ್ಲಿ ಸ್ವಂತ ಸೌರಶಕ್ತಿ ಪ್ಲಾಂಟ್‌ನಿಂದ ಲಭಿಸುವ ವಿದ್ಯುತ್‌ನಲ್ಲಿ ಕಾರ್ಯಾ ಚರಿಸುವ ಏಕ ಕ್ಷೇತ್ರವಾಗಿದೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರವೆಂದು ಅಧಿಕಾರಿಗಳು ತಿಳಿಸಿದ್ದಾರೆ.





