ಕೆಎಸ್‌ಆರ್‌ಟಿಸಿ ಬಸ್‌ನ ಚಕ್ರ ಸ್ಫೋಟ: ಪ್ಲಾಟ್‌ಫಾಂ ಸೀಟಿನಡಿ ಕಾಲು ಸಿಲುಕಿ ಪ್ರಯಾಣಿಕೆ ಜಖಂ

ಕಾಸರಗೋಡು: ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ  ಬಸ್‌ನ ಚಕ್ರ ಸಿಡಿದು ಪ್ಲಾಟ್‌ಫಾಂಗೆ ಹಾನಿ ಉಂಟಾಗಿದ್ದು, ಇದರಿಂದ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕೆಯ ಕಾಲು ಸೀಟಿನ ಅಡಿಭಾಗದಲ್ಲಿ ಸಿಲುಕಿ ಮುರಿತಕ್ಕೊ ಳಗಾದ ಘಟನೆ ನಡೆದಿದೆ. ನೀಲೇಶ್ವರ ಅಳಿತ್ತಲ ನಿವಾಸಿ ಎಂ.ಕೆ. ಕುಂಞಾ ಯಿಷ (39) ಗಾಯಗೊಂಡ ಪ್ರಯಾಣಿಕೆ.

ಪಯ್ಯನ್ನೂರಿನಿಂದ ಹೊಸದುರ್ಗಕ್ಕೆ ಬರಲೆಂದು ಇವರು ನೀಲೇಶ್ವರದಿಂದ ಬಸ್ಸೇರಿದ್ದರು. ಬಸ್ ಹೊಸದುರ್ಗ ಸೌತ್‌ಗೆ ತಲುಪಿದಾಗ ಭಾರೀ ಶಬ್ದದೊಂದಿಗೆ ಅದರ ಚಕ್ರ ಸಿಡಿದಿದೆ. ಅದರ ರಭಸಕ್ಕೆ ಬಸ್‌ನ ಅಡಿ ಭಾಗದ ಪ್ಲಾಟ್ ಫಾಂಗೂ ಹಾನಿ ಉಂಟಾದಾಗ ಪ್ರಯಾಣಿಕೆ ಕುಂಞಾಯಿಷಾರ ಕಾಲು ಸೀಟಿನ ಅಡಿಭಾಗದಲ್ಲಿ ಸಿಲುಕಿಕೊಂಡಿತು. ತಕ್ಷಣ ಅವರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಇವರ ಎಡಕಾ ಲಿನ ಎಲುಬಿಗೆ ಮುರಿತ ಉಂಟಾ ಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೊಸದುರ್ಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಘಟನೆ ವೇಳೆ ಬಸ್‌ನಲ್ಲಿ ೭೦ರಷ್ಟು ಪ್ರಯಾಣಿ ಕರಿದ್ದರೆಂದು ತಿಳಿಯಲಾಗಿದೆ.

You cannot copy contents of this page