ಎದೆನೋವು ಚಿಕಿತ್ಸೆಗಾಗಿ ಆಸ್ಪತ್ರೆಗೆ  ತೆರಳಿದ ಅಕ್ಕಸಾಲಿಗ ಕುಸಿದುಬಿದ್ದು ಮೃತ್ಯು

ಉಪ್ಪಳ: ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ  ವ್ಯಕ್ತಿ ಅಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಂದ್ಯೋಡು ಮಳ್ಳಂಗೈ ನಿವಾಸಿಯೂ ಕುಂಬಳೆಯಲ್ಲಿ ಅಕ್ಕಸಾಲಿಗನಾಗಿದ್ದ ಪುಂಡರೀಕ ಆಚಾರ್ಯ ವೈ.ಎನ್ (56) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಮನೆಯಲ್ಲಿದ್ದ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಚಿಕಿತ್ಸೆಗಾಗಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಟೋಕನ್ ತೆಗೆದು ಕುಳಿತಿದ್ದಾಗ ಕುಸಿದುಬಿದ್ದಿದ್ದಾರೆ.  ಕೂಡಲೇ ವೈದ್ಯರು ತಪಾಸಣೆ ನಡೆಸಿದಾಗ ಮೃತಪಟ್ಟಿರುವು ದಾಗಿ ತಿಳಿದುಬಂದಿದೆ. ಇದೇ ವೇಳೆ ಆಸ್ಪತ್ರೆಗೆ ತೆರಳಿದ ಪುಂಡರೀಕ ಆಚಾರ್ಯರಿಗೆ ಮನೆಯವರು ಫೋನ್ ಕರೆ ಮಾಡಿದ್ದು, ಆವಾಗಲೇ  ಅವರು ಆಸ್ಪತ್ರೆಯಲ್ಲಿ ಕುಸಿದುಬಿದ್ದು ಮೃತಪಟ್ಟ ವಿಷಯ ಮನೆಯವರಿಗೆ ತಿಳಿದು ಬಂದಿದೆ. ಮೃತರ ಅಂತ್ಯಸಂಸ್ಕಾರ ಇಂದು ಮನೆ ಪರಿಸರದಲ್ಲಿ ನಡೆಯಲಿ ರುವುದು.  ಹಲವು ವರ್ಷಗಳಿಂದ ಕುಂ ಬಳೆಯಲ್ಲಿ ಚಿನ್ನದ ಕೆಲಸ ನಡೆಸುತ್ತಿರುವ ಇವರು ಚಿರಪರಿಚಿತರಾಗಿದ್ದರು.

ದಿವಂಗತರಾದ ವೈ.ಎನ್. ನಾರಾಯಣ ಆಚಾರ್ಯ-ರಾಧಾ ದಂಪತಿಯ ಪುತ್ರನಾದ ಮೃತರು ಪತ್ನಿ ಭಾರತಿ, ಮಕ್ಕಳಾದ ವಂದನ, ಯತಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪುಂಡರೀಕ ಆಚಾರ್ಯರ ಸಹೋದರರಾದ ಯಾದವ ಹಾಗೂ ವಾಮನ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page