ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಣೇಶನ್ ಒ.ಎಂ ನೇತೃತ್ವದ ಪೊಲೀ ಸರು ನಿನ್ನೆ ಕಿದೂರು ಮಯಂ ರಳಂನಲ್ಲಿ ನಡೆಸಿದ ಕಾರ್ಯಾಚರಣೆ ಉಳುವಾರು ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ತೆಗೆದು ಸಾಗಿಸುತ್ತಿದ್ದ ಲಾರಿಯನ್ನು ಮಾಲು ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಪ್ರಸ್ತುತ ಲಾರಿ ಚಾಲಕ ನೆಕ್ರಾಜೆ ಸಾಲತ್ತಡ್ಕದ ಮುಹಮ್ಮದ್ ಸಾಬಿತ್ (22) ಮತ್ತು ಪ್ರಸ್ತುತ ಲಾರಿಯ ಆರ್.ಸಿ ಮಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಚಾಲಕನನ್ನು ಪೊಲೀಸರು ಬಂಧಿ ಸಿದ್ದು, ನಂತರ ಆತನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಸರಕಾರಿ ಮಾಲು ಆಗಿರುವ ಹೊಳೆಯ ಹೊಯ್ಗೆಯನ್ನು ಕದ್ದು ಅಕ್ರಮವಾಗಿ ಸಾಗಿಸಿದುದಕ್ಕೆ ಸಂಬಂಧಿಸಿದ ಕೇರಳ ನದಿ ದಡ ಸಂರಕ್ಷಣಾ ಕಾನೂನು ಪ್ರಕಾರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಪೊಲೀಸರು ಹೊಳೆ ಬಳಿ ನಡೆಸಿದ ಪರಿಶೀಲನೆಯಲ್ಲಿ ಹೊಯ್ಗೆ ಮತ್ತು ಅದರಲ್ಲಿರುವ ಕಲ್ಲುಗಳನ್ನು ಬೇರ್ಪಡಿಸಲು ಉಪಯೋಗಿಸುತ್ತಿದ್ದ ನೆಟ್ನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಲ್ಲುಗಳನ್ನು ಬೇರ್ಪಡಿಸಿದ ಹೊಯ್ಗೆಗೆ ಹೆಚ್ಚು ಹಣ ಲಭಿಸುತ್ತಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.







