ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಕಳವು ಆರೋಪಿ ಪೊಲೀಸ್ ಕಸ್ಟಡಿಯಲ್ಲಿ : ಕಿನ್ನಿಂಗಾರಿನಲ್ಲಿ ರಬ್ಬರ್ ಶೀಟ್ ಕಳವು ಪ್ರಕರಣ ಬೆಳಕಿಗೆ

ಮುಳ್ಳೇರಿಯ: ಬೆಳ್ಳೂರು ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಿಂದ ಕಾಣಿಕೆ ಹುಂಡಿಗಳನ್ನು ಕಳವುಗೈದ ಪ್ರಕರಣದಲ್ಲಿ  ಆರೋಪಿ ಯನ್ನು ಆದೂರು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಿನ್ನಿಂಗಾರು ಬಳಯ ಮದಕ್ಕ ನಿವಾಸಿ ಸತೀಶ್ (26) ಎಂಬಾತನನ್ನು ಆದೂರು ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ.  ಪುತ್ತೂರು ಬಳಿಯ ಬೆಟ್ಟಂಪಾಡಿ ಕ್ಷೇತ್ರವೊಂದ ರಿಂದ ಕಳವುಗೈದ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಸತೀಶನನ್ನು ಬಂಧಿಸಿದ್ದರು.  ಬಳಿಕ ಈತನನ್ನು ತನಿಖೆಗೊಳಪಡಿಸಿದಾಗ ಕಳೆದ ಅಗೋಸ್ತ್ ೨೪ರಂದು ರಾತ್ರಿ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಕಾಣಿಕೆ  ಹುಂಡಿಗಳನ್ನು ಕಳವು ನಡೆಸಿರುವುದು ಸತೀಶನಾಗಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ  ಅಗೋಸ್ತ್ 18ರಂದು  ಕಿನ್ನಿಂಗಾರು ಕೊಚ್ಚಿಯ ಕೃಷಿಕ ಮೋಹನಕೃಷ್ಣ ಭಟ್‌ರ ರಬ್ಬರ್  ದಾಸ್ತಾನು ಶೆಡ್‌ನಿಂದ  250 ರಬ್ಬರ್ ಶೀಟ್ ಕಳವು ನಡೆಸಿರುವುದು ಕೂಡಾ ಸತೀಶನಾಗಿದ್ದಾನೆಂದು ಸ್ಪಷ್ಟಗೊಂಡಿದೆ. ಈ ವಿಷಯವನ್ನು ಪುತ್ತೂರು ಗ್ರಾಮಾಂ ತರ ಪೊಲೀಸರು ಆದೂರು ಪೊಲೀಸರಿಗೆ ತಿಳಿಸಿದ್ದರು. 

ಈ ಹಿನ್ನೆಲೆಯಲ್ಲಿ ಆದೂರು ಪೊಲೀಸರು ನ್ಯಾಯಾಲಯ ದಲ್ಲಿ ಅರ್ಜಿ ಸಲ್ಲಿಸಿ ಸತೀಶನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ತನಿಖೆಯಂ ಗವಾಗಿ ಸತೀಶನನ್ನು ನೆಟ್ಟಣಿಗೆ ಕ್ಷೇತ್ರ ಹಾಗೂ  ಮೋಹನಕೃಷ್ಣ ಭಟ್‌ರ ರಬ್ಬರ್ ದಾಸ್ತಾನು ಕೇಂದ್ರಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ನೆಟ್ಟಣಿಗೆ ಕ್ಷೇತ್ರದ ಸಿಸಿ ಟಿವಿ ಕ್ಯಾಮರಾದಿಂದ ಲಭಿಸಿದ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನ ಮುಂದುವರಿ ಯುತ್ತಿದ್ದಂತೆ ಸತೀಶ ಪುತ್ತೂರು ಗ್ರಾಮಾಂತರ ಪೊಲೀಸರ ಸೆರೆಗೊಳಗಾಗಿ ದ್ದಾನೆ.  ಕ್ಷೇತ್ರಕ್ಕೆ ನುಗ್ಗಿದ ಆರೋಪಿ ಎರಡು ಕಾಣಿಕೆ ಹುಂಡಿಗಳನ್ನು ಅಲ್ಲಿಂದ  ಕಳವು ನಡೆಸಿದ್ದನು. ಬಳಿಕ ಒಂದು ಕಾಣಿಕೆ ಹುಂಡಿಯನ್ನು ಕ್ಷೇತ್ರ ಸಮೀಪದಲ್ಲೂ ಇನ್ನೊಂದನ್ನು ಕ್ಷೇತ್ರದಿಂದ ಸ್ವಲ್ಪದೂರದಲ್ಲಿ ಉಪೇಕ್ಷಿಸಿರುವುದು ಕಂಡುಬಂದಿತ್ತು.  ಕಾಣಿಕೆ ಹುಂಡಿಯನ್ನು ತೆರೆಯಲು ಆರೋಪಿಗೆ ಸಾಧ್ಯವಾಗಿರಲಿಲ್ಲ.

You cannot copy contents of this page