ಬದಿಯಡ್ಕ: ಕೇಂದ್ರ ಸರಕಾರದ ಫಲಾನುಭವಿಗಳ ಸಭೆ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ದೀಪ ಪ್ರಜ್ವಲನೆ ಕಾರ್ಯಕ್ರಮ ನಿನ್ನೆ ಬದಿಯಡ್ಕ ಪಂಚಾಯತ್ ಸಿಡಿಎಸ್ ಹಾಲ್‌ನಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ ದೀಪ ಪ್ರಜ್ವಲನೆಗೈದು ಮಾತನಾಡಿ ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳು ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವಾಗು ತ್ತಿದ್ದು ಅರ್ಹ ಫಲಾನುಭವಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ ಉದ್ಘಾಟಿಸಿ ಮಾತನಾಡಿದರು. ಯುಪಿಐ, ಆಧಾರ್ ಸಂಪರ್ಕ ಮತ್ತು ಜನ್‌ಧನ್ ಖಾತೆಗಳ ಮೂಲಕ ದೇಶದ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿ ಸಿದ್ದು ಅತ್ಯಂತ ಯಶಸ್ವೀ ಹೆಜ್ಜೆಯಾಗಿದೆ.
ವಂದೇ ಭಾರತ್ ರೈಲುಗಳು, ರಾಷ್ಟ್ರೀಯ ಹೆದ್ದಾರಿಗಳ ಜಾಲದ ವಿಸ್ತರಣೆ ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿ, ಸ್ವಚ್ಛಭಾರತ ಅಭಿಯಾನ, ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ ಮತ್ತು ಜಲಜೀವನ್ ಮಿಶನ್ ಮೊದಲಾದ ಯೋಜನೆಗಳು ದೇಶದ ಎಲ್ಲಾ ಜನರಿಗೂ ನೀಡಿದ ಕೊಡುಗೆಯಾಗಿದೆಯೆಂದು ಅವರು ತಿಳಿಸಿದರು. ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಅಧ್ಯಕ್ಷತೆ ವಹಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಜಿಲ್ಲಾ ಪಂಚಾ ಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲೋಕ್ ಪಂಚಾಯತ್ ಸದಸ್ಯ ಮಹೇಶ್ ವಳಕ್ಕುಂಜ, ಪಂಚಾ ಯತ್ ಸದಸ್ಯರಾದ ಹರೀಶ ಕೆ, ಶ್ಯಾಮ ಪ್ರಸಾದ ಸರಳಿ, ಉಷಾ ಪಳ್ಳತ್ತಡ್ಕ, ಸಿಡಿಎಸ್ ಅಧ್ಯಕ್ಷೆ ಸುಲೋಚನ ಉಪಸ್ಥಿತರಿದ್ದರು. ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೆ ಸ್ವಾಗತಿಸಿ, ಮಧುಸೂದನ ಕಂಗಿಲ ವಂದಿಸಿದರು. ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನ್ಮ ದಿನ ಪ್ರಯುಕ್ತ ಸಿಹಿ ತಿಂಡಿ ಹಂಚಲಾಯಿತು.







