ವಳಯಂ ಗ್ರಾಮದ ಮೊದಲ ವೈದ್ಯ ಅಬ್ಸರ್ ಫವಾಸ್

ಕುಂಬಳೆ: ಎಂಬಿಬಿಎಸ್ ಪರೀಕ್ಷೆಯಲ್ಲಿ ಮಂಗಲ್ಪಾಡಿಯ ವಳಯಂ ನಿವಾಸಿಯಾದ ಅಬ್ಸರ್ ಪವಾಸ್ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ.

ಈ ಮೂಲಕ ವಳಯಂ ಗ್ರಾಮದ ಮೊದಲ ವೈದ್ಯರಾಗಿ ಅಬ್ಸರ್ ಪವಾಸ್ ಗುರುತಿಸಲ್ಪ ಟ್ಟಿದ್ದಾರೆ. ಇವರು ಮುಂಬೈಯ  ಅಬೂಬಕ್ಕರ್ ಹಾಗೂ ಫೌಸಿಯಾ ಅಬೂಬಕ್ಕರ್ ದಂಪತಿಯ ಪುತ್ರನಾಗಿದ್ದಾರೆ.  ಫವಾಸ್‌ರ ಪ್ರಾಥಮಿಕ ಶಿಕ್ಷಣ ಮುಂಬೈಯಲ್ಲಿ ನಡೆದಿತ್ತು. ಅನಂತರ ಮುಟ್ಟಂ, ಕುಂಬಳೆ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಪ್ಲಸ್‌ಟು  ಬಳಿಕ ನೀಟ್ ಪರೀಕ್ಷೆಗಾಗಿ ಪಾಲಾದ ಕೋಚಿಂಗ್ ಸೆಂಟರ್‌ಗೆ ಸೇರಿದ್ದಾರೆ.  ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ತಿರುವನಂತಪುರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದಿದ್ದು, ಇದೀಗ ಹೆಚ್ಚು ಅಂಕಗ ಳೊಂದಿಗೆ ಉತ್ತೀರ್ಣರಾ ಗಿದ್ದಾರೆ.  ಅರ್ಶಾದ್ ಫಯೀಸ್,  ಆಯಿಶ ಅಫ್ರೀನ್, ಅಶ್ರೀನ್ ಮರಿಯಂ ಎಂಬಿವರು ಫವಾಸ್‌ರ  ಸಹೋದರ ರಾಗಿದ್ದಾರೆ.  ಹಲವು ವರ್ಷಗಳಿಂದ  ಮುಂಬೈಯಲ್ಲಿರುವ ತಂದೆ ಅಬೂಬಕ್ಕರ್  ಮುಂಬೈಯ ಕೇರಳ ಮುಸ್ಲಿಂ ಜಮಾಂiiತ್‌ನ ಕೌನ್ಸಿಲ್ ಸದಸ್ಯರಾಗಿದ್ದಾರೆ.

You cannot copy contents of this page